ನವದೆಹಲಿ (PTI): ಸೌದಿ ಅರೇಬಿಯಾಕ್ಕೆ ವಿಮಾನಗಳ ಹಾರಾಟ ರದ್ದುಗೊಳಿಸಿರುವುದನ್ನು ಅಕ್ಟೋಬರ್ 24ರವರೆಗೆ ವಿಸ್ತರಿಸಲಾಗಿದೆ ಎಂದು ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನಯಾನ ಸಂಸ್ಥೆಗಳು ಶನಿವಾರ ಘೋಷಿಸಿವೆ.
ಇದಕ್ಕೂ ಮುನ್ನ, ಇಂಡಿಗೊ ಮತ್ತು ಅಕಾಶ ಏರ್ ಸಂಸ್ಥೆಗಳೂ ಸೌದಿ ಅರೇಬಿಯಾದ ನಗರಗಳಿಗೆ ವಿಮಾನ ಸೇವೆಯನ್ನು ರದ್ದುಗೊಳಿಸಿದ್ದವು.
'ಸೌದಿಯಲ್ಲಿನ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ದೆಹಲಿಯಿಂದ ರಿಯಾದ್, ದಮಾಮ್ ಮತ್ತು ಜೆಡ್ಡಾಗೆ ತೆರಳುವ ಮತ್ತು ಅಲ್ಲಿಂದ ಬರುವ ಎಲ್ಲ ವಿಮಾನಗಳನ್ನು ಅಕ್ಟೋಬರ್ 24ರವರೆಗೆ ರದ್ದುಪಡಿಸಲಾಗಿದೆ' ಎಂದು ಏರ್ ಇಂಡಿಯಾ ಹಾಗೂ ಏರ್ ಇಂಡಿಯಾ ಎಕ್ಸ್ಪ್ರೆಸ್ 'ಎಕ್ಸ್' ಪೋಸ್ಟ್ನಲ್ಲಿ ತಿಳಿಸಿವೆ.



