HEALTH TIPS

ಹೈದರಾಬಾದ್‌| ಬಾಂಬ್‌ ಇದೆ ಎಂದ ಬಾಲಕಿ: ವಿಮಾನ ತಪಾಸಣೆ

ಹೈದರಾಬಾದ್‌:‌ 'ವಿಮಾನದಲ್ಲಿ ಬಾಂಬ್‌ ಇದೆ' ಎಂದು ಬಾಲಕಿಯೊಬ್ಬಳು ಹೇಳಿದ ಮಾತು ಶನಿವಾರ ಅಹಮದಾಬಾದ್‌ನಿಂದ ಹೈದರಾಬಾದ್‌ಗೆ ಆಗಮಿಸುತ್ತಿದ್ದ ವಿಮಾನದಲ್ಲಿ ಕೆಲ ಹೊತ್ತು ಆತಂಕಕ್ಕೆ ಕಾರಣವಾಗಿತ್ತು.


ಇಲ್ಲಿನ ರಾಜೀವ್‌ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಭದ್ರತಾ ತಪಾಸಣೆಗೆ ಒಳಪಡಿಸಲಾಯಿತು. 

ಶಾಲಾ ಪ್ರವಾಸ ಮುಗಿಸಿಕೊಂಡು ಸಹಪಾಠಿಗಳು ಮತ್ತು ಶಿಕ್ಷಕರ ಜೊತೆ ಶನಿವಾರ ವಾಪಸಾಗುತ್ತಿದ್ದ ಏಳನೇ ತರಗತಿ ವಿದ್ಯಾರ್ಥಿನಿ, ತನ್ನ ಸಹಪಾಠಿಗೆ 'ವಿಮಾನದಲ್ಲಿ ಬಾಂಬ್‌ ಇದೆ' ಎಂದು ಹೇಳಿದ್ದಳು.

'ಬಾಲಕಿ ಮಾತನ್ನು ಕೇಳಿಸಿಕೊಂಡಿದ್ದ ವಿಮಾನದ ಸಿಬ್ಬಂದಿಯೊಬ್ಬರು ಕೂಡಲೇ ಪೈಲಟ್‌ಗೆ ಮಾಹಿತಿ ನೀಡಿದರು. ಭದ್ರತಾ ಶಿಷ್ಟಾಚಾರದಂತೆ ವಿಮಾನದ ಸಂಪೂರ್ಣ ತಪಾಸಣೆ ನಡೆಸಲಾಯಿತು. ಯಾವುದೇ ಅನುಮಾನಾಸ್ಪದ ವಸ್ತು ಪತ್ತೆ ಆಗಲಿಲ್ಲ. ನಂತರ ಅದೊಂದು ತಮಾಷೆ ಮಾತು ಎನ್ನುವುದು ಗೊತ್ತಾಗಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಅರಿವಿಲ್ಲದೆ ಬಾಲಕಿ ಮಾತನಾಡಿದ್ದಾಳೆ. ಬೆದರಿಕೆ ಹಾಕುವ ದುರುದ್ದೇಶ ಆಕೆಗೆ ಇರಲಿಲ್ಲ ಎಂದು ಶಿಕ್ಷಕರು ಸ್ಪಷ್ಟಪಡಿಸಿದರು. ಆಕೆ ವಯಸ್ಕಳಲ್ಲದ ಕಾರಣ ಯಾವುದೇ ಪ್ರಕರಣ ದಾಖಲಿಸಿಲ್ಲ' ಎಂದು ಅಧಿಕಾರಿಗಳು ಹೇಳಿದ್ದಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries