HEALTH TIPS

ಭಯೋತ್ಪಾದನೆ ಬೆಂಬಲಿಸುವವರ ವಿರುದ್ಧ ಶೂನ್ಯ ಸಹಿಷ್ಣುತೆ: ರಾಜನಾಥ ಸಿಂಗ್‌

ನವದೆಹಲಿ: ಭಾರತ-ಅಮೆರಿಕ ನಡುವಿನ 10 ವರ್ಷಗಳ ರಕ್ಷಣಾ ಯೋಜನೆಯ ಪ್ರಗತಿಯನ್ನು ಭಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಮತ್ತು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್‌ ಹೆಗ್ಸೆತ್‌ ಅವರು ಬುಧವಾರ ಪರಿಶೀಲಿಸಿದರು.


ಫಿಲಿಪ್ಪೀನ್ಸ್‌ನಲ್ಲಿ ಹೆಗ್ಸೆತ್‌ ಅವರೊಂದಿಗೆ ನಡೆಸಿದ ಮಾತುಕತೆಯಲ್ಲಿ ಸಿಂಗ್‌ ಅವರು, 'ಭಯೋತ್ಪಾದಕ ಸಂಘಟನೆಗಳನ್ನು ಬೆಂಬಲಿಸುವ, ತರಬೇತಿ ನೀಡುವ ಅಥವಾ ಹಣಕಾಸು ಒದಗಿಸುವ ದೇಶಗಳ ಬಗ್ಗೆ ಜಾಗತಿಕ ಸಮುದಾಯವು 'ರಾಜಿಯಾಗದೆ, ಶೂನ್ಯ ಸಹಿಷ್ಣುತೆಯ ನೀತಿ'ಯನ್ನು ಕಾಯ್ದುಕೊಳ್ಳಬೇಕು' ಎಂದು ಒತ್ತಿ ಹೇಳಿದರು. 

ಇದರೊಂದಿಗೆ, ಎರಡೂ ಕಡೆಯವರು ಇಂಡೊ-ಪೆಸಿಫಿಕ್‌ ಪರಿಸ್ಥಿತಿ ಮತ್ತು ಕ್ಷಿಪ್ರವಾಗಿ ಬದಲಾಗುತ್ತಿರುವ ಪ್ರಾದೇಶಿಕ ಭದ್ರತಾ ಪರಿಸ್ಥಿತಿಗಳನ್ನು ಪರಿಶೀಲಿಸಿದರು. ಈ ಮಾತುಕತೆ ಉಭಯ ದೇಶಗಳ ನಡುವಿನ ರಕ್ಷಣಾ ಹಾಗೂ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಹೊಂದಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತದೊಂದಿಗೆ ಅಮೆರಿಕದ ಸಂಪೂರ್ಣ ಬೆಂಬಲವನ್ನು ಹೆಗ್ಸೆತ್‌ ಅವರು ಪುನರುಚ್ಚರಿಸಿದರು.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries