ಕಾಸರಗೋಡು: ನಗರದ ನಾಯಕ್ಸ್ ರಸ್ತೆ ಸೇರಿದಂತೆ ಕಾಸರಗೋಡು ನಗರಸಭಾ ವ್ಯಾಪ್ತಿಯ ಹದಗೆಟ್ಟ ರಸ್ತೆಗಳನ್ನು ಶೀಘ್ರ ದುರಸ್ತಿಗೊಳಿಸಬೇಕೆಂದು ಆಗ್ರಹಿಸಿ, ಸಿಐಟಿಯು ಆಟೊ ಕಾರ್ಮಿಕರ ಸಂಘಟನೆಯ ನೇತೃತ್ವದಲ್ಲಿ ನಗರಸಭಾ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಯಿತು.
ನಗರಸಭಾ ವ್ಯಾಪ್ತಿಯ ಎಲ್ಲ ರಸ್ತೆಗಳನ್ನು ವಾಹನ ಸಂಚಾರಕ್ಕೆ ಯೋಗ್ಯವಾಗುವಂತೆ ದುರಸ್ತಿಗೊಳಿಸಬೇಕು. ಆಟೊ ರಿಕ್ಷಾಗಳಿಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಆಯೋಜಿಸಲಾಗಿತ್ತು.
ಧರಣಿಗೂ ಮುನ್ನ ಕಾರ್ಮಿಕರ ಪ್ರತಿಭಟನಾ ಮೆರವಣಿಗೆ ನಡೆಯಿತು.
ನಗರಸಭಾ ಕಚೇರಿ ಎದುರು ನಡೆದ ಧರಣಿಯನ್ನು ಸಿಐಟಿಯು ಜಿಲ್ಲಾ ಜಂಟಿ ಕಾರ್ಯದರ್ಶಿ ಎ.ಆರ್. ಧನ್ಯವಾದ್ ಉದ್ಘಾಟಿಸಿದರು. ರವಿ ಕೆ. ನೆಲ್ಲಿಕುಂಜೆ ಅಧ್ಯಕ್ಷತೆ ವಹಿಸಿದ್ದರು. ಗಿರಿಕೃಷ್ಣನ್, ಶಾಫಿ ಚಾಲಕ, ಪಿ. ಕುಞಿರಾಮನ್ ಹಾಗೂ ಎನ್. ರಾಮನ್ ಉಪಸ್ಥಿತರಿದ್ದರು. ವಿ. ರವೀಂದ್ರನ್ ಪೆರುಂಬಳ ಸ್ವಾಗತಿಸಿದರು.

