HEALTH TIPS

ಹೌತಿ ದಾಳಿಗಳ ಆತಂಕ: ಸೌದಿ ಅರೇಬಿಯಾಕ್ಕೆ ಮಿಲಿಟರಿ ಬೆಂಬಲ ನೀಡಲು ಈಜಿಪ್ಟ್ ಅನುಮೋದನೆ

ಕೈರೊ: ಹೌತಿ ಬಂಡುಕೋರರ ದಾಳಿಗಳಿಂದ ಸೌದಿ ಅರೇಬಿಯವನ್ನು ರಕ್ಷಿಸಲು ಮಿಲಿಟರಿ ಬೆಂಬಲ ನೀಡುವ ಪ್ರಸ್ತಾವಕ್ಕೆ ಈಜಿಪ್ಟ್ ಅನುಮೋದನೆ ನೀಡಿದೆ. ಈ ಬೆಳವಣಿಗೆಯು ಯೆಮೆನ್‌ ನ ಹೌತಿ ಬಂಡುಕೋರರು ಮತ್ತು ಸೌದಿ ಅರೇಬಿಯ ನಡುವಿನ ಪ್ರಾದೇಶಿಕ ಸಂಘರ್ಷದಲ್ಲಿ ಈಜಿಪ್ಟ್ ನೇರವಾಗಿ ತೊಡಗಿಸಿಕೊಳ್ಳುವ ಸಾಧ್ಯತೆಯನ್ನು ಹೆಚ್ಚಿಸಿದೆ ಎಂದು Aljazeera ವರದಿ ಮಾಡಿದೆ. 


ಹೌತಿ ದಾಳಿಗಳಿಂದ ತನ್ನ ಗಲ್ಫ್ ಮಿತ್ರರಾಷ್ಟ್ರವಾದ ಸೌದಿ ಅರೇಬಿಯವನ್ನು ರಕ್ಷಿಸುವ ನಿಟ್ಟಿನಲ್ಲಿ ಮಿಲಿಟರಿ ಬೆಂಬಲಕ್ಕೆ ಅನುಮೋದನೆ ನೀಡುವಂತೆ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಕಳೆದ ವಾರ ಸಂಸತ್ತನ್ನು ಕೋರಿದ್ದರು. ಹೌತಿಗಳ ಮುನ್ನಡೆಯು ಈಜಿಪ್ಟ್‌ನ ಸೂಯೆಜ್ ಕಾಲುವೆಗೆ ಪ್ರವೇಶ ಮಾರ್ಗವಾಗಿರುವ ಆಯಕಟ್ಟಿನ ಮಹತ್ವದ ಬಾಬ್ ಎಲ್-ಮಂಡೆಬ್ ಜಲಸಂಧಿಗೂ ಬೆದರಿಕೆಯೊಡ್ಡಿದೆ.

ಅರಬ್ ಜಗತ್ತಿನಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಈಜಿಪ್ಟ್, ಈ ಪ್ರದೇಶದ ಅತಿದೊಡ್ಡ ಸೇನೆಗಳಲ್ಲಿ ಒಂದನ್ನು ಹೊಂದಿದೆ. 2015ರ ಮಾರ್ಚ್‌ ನಲ್ಲಿ ಯೆಮೆನ್ ಯುದ್ಧ ಆರಂಭವಾದಾಗ ಈಜಿಪ್ಟ್ ಸೌದಿ ನೇತೃತ್ವದ ಮೈತ್ರಿಕೂಟವನ್ನು ಸೇರಿಕೊಂಡಿತ್ತು. ಆ ಸಂದರ್ಭದಲ್ಲಿ ಮುಖ್ಯವಾಗಿ ನೌಕಾಪಡೆಯ ಮೂಲಕ ಸಹಕಾರ ನೀಡಿತ್ತು. ಸುಮಾರು 800 ಭೂಸೇನಾ ಸಿಬ್ಬಂದಿಯನ್ನೂ ನಿಯೋಜಿಸಿತ್ತು. ಆದರೆ, ಯುದ್ಧದಲ್ಲಿ ಅವರ ಪಾತ್ರ ಸೀಮಿತವಾಗಿತ್ತು.

1991ರ ಗಲ್ಫ್ ಯುದ್ಧದ ಬಳಿಕ ಈಜಿಪ್ಟ್ ಇದೇ ಮೊದಲ ಬಾರಿಗೆ ವಿದೇಶದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಭೂಸೇನೆಯನ್ನು ನಿಯೋಜಿಸುತ್ತಿದೆ. ಈ ಬೆಳವಣಿಗೆಯು ಯೆಮೆನ್ ಸಂಘರ್ಷದಲ್ಲಿ ಈಜಿಪ್ಟ್‌ ನ ಪಾತ್ರ ಮಹತ್ವದ ತಿರುವು ಪಡೆಯುವ ಸಾಧ್ಯತೆಯನ್ನು ಸೂಚಿಸಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries