HEALTH TIPS

ಕುಂಬಳೆ ಸಮೀಪ ಆಯತಪ್ಪಿ ಬಾವಿಗೆ ಬಿದ್ದು ವ್ಯಕ್ತಿ ಸಾವು

ಕುಂಬಳೆ: ಸಮೀಪದ ಕಳತ್ತೂರು ಕಾರಿಂಜ ಅಳಮನೆ ನಿವಾಸಿ ಸಂಜೀವ (55) ಎಂಬವರು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ. ಅವರ ಮೃತದೇಹವು ಮನೆ ಸಮೀಪದ ಆವರಣಗೋಡೆಯಿಲ್ಲದ ತೆರೆದ ಬಾವಿಯಲ್ಲಿ ಪತ್ತೆಯಾಗಿದೆ.

ಸಂಜೀವ ಅವರ ಪತ್ನಿ ಕೆಲಸಕ್ಕೆ ಹಾಗೂ ಮಗ ಕಾಲೇಜಿಗೆ ತೆರಳಿದ್ದರಿಂದ ಹಗಲಿನ ವೇಳೆಯಲ್ಲಿ ಅವರು ಮನೆಯಲ್ಲಿ ಒಬ್ಬರೇ ಇದ್ದರು. ಸಂಜೆ ಪುತ್ರ ಕಾಲೇಜಿನಿಂದ ಮನೆಗೆ ಮರಳಿದಾಗ ತಂದೆ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಆತಂಕಗೊಂಡು ಅಕ್ಕಪಕ್ಕ ಹುಡುಕಾಡಿದಾಗ, ಮನೆ ಸಮೀಪದ ಬಾವಿಯಲ್ಲಿ ಸಂಜೀವ ಅವರು ಬಿದ್ದಿರುವುದು ಪತ್ತೆಯಾಗಿದೆ.

ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅವರನ್ನು ಬಾವಿಯಿಂದ ಮೇಲಕ್ಕೆತ್ತಿ ಕುಂಬಳೆ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಆಯತಪ್ಪಿ ಬಾವಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries