HEALTH TIPS

ಪೆರ್ಲದಲ್ಲಿ ಯೂತ್ ಕಾಂಗ್ರೆಸ್ ಎಣ್ಮಕಜೆ ಮಂಡಲ ಸಮಿತಿಯ ನಾಯಕತ್ವ ಸಮಾವೇಶ

ಪೆರ್ಲ : ಯೂತ್ ಕಾಂಗ್ರೆಸ್ ಎಣ್ಮಕಜೆ ಮಂಡಲ ಸಮಿತಿಯ ನೇತೃತ್ವದಲ್ಲಿ ಆಯೋಜಿಸಲಾದ ಯೂತ್ ಕಾಂಗ್ರೆಸ್ ನಾಯಕತ್ವ ಸಮಾವೇಶ ಪೆರ್ಲದ ಇಂದಿರಾ ಭವನದಲ್ಲಿ ನಡೆಯಿತು.

ಸಮಾವೇಶವನ್ನು ಡಿಸಿಸಿ ಪ್ರಧಾನ ಕಾರ್ಯದರ್ಶಿ, ಜಿ.ಪಂ.ಸದಸ್ಯ ಸೋಮಶೇಖರ ಜೆ.ಎಸ್. ಉದ್ಘಾಟಿಸಿದರು. ಫಾರೂಕ್ ಪಿ.ಎಂ. ಅಧ್ಯಕ್ಷತೆ ವಹಿಸಿದ್ದರು.

ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕಾರ್ತಿಕೇಯನ್ ಪೆರಿಯೆ ಮುಖ್ಯ ಭಾಷಣಗೈದರು. ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ಅಸೆಂಬ್ಲಿ ಸಮಿತಿ ಅಧ್ಯಕ್ಷ ಜುನೈದ್ ಉರುಮಿ ಹಾಗೂ ಎಣ್ಮಕಜೆ ಮಂಡಲ ಕಾಂಗ್ರೆಸ್ ಅಧ್ಯಕ್ಷ  ಬಿ.ಎಸ್. ಗಾಂಭೀರ್, ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷೆ, ಮಹಿಳಾ ಕಾಂಗ್ರೆಸ್ ನೇತಾರೆ ಕುಸುಮಾವತಿ ಬಿ, ಕೆಎಸ್‍ಇಬಿಯ ನಿವೃತ್ತ ಸಹಾಯಕ ಇಂಜಿನಿಯರ್ ರಝಾಕ್, ನಲ್ಕದ ರಝಾಕ್ ಹಾಗೂ ರಮೇಶ್ ಅವರನ್ನು ಗೌರವಿಸಲಾಯಿತು.

ಯುವ ಸದಸ್ಯರನ್ನು ಸಂಘಟಿಸಿ ರಕ್ತದಾನ ಸಂಘಟನೆಯ ರಚನೆ,ಯುವ ಕಾಂಗ್ರೆಸ್ ನೇತಾರ ದಿ.ಜಬ್ಬಾರ್ ಸಂಸ್ಮರಣೆ ಕಾರ್ಯಕ್ರಮ ಆಯೋಜನೆ ಹಾಗೂ

ವಾರ್ಡ್ ಸಮಿತಿ ರಚನೆಗೆ ನಿರ್ಧರಿಸಲಾಯಿತು.  ನಜೀಬ್ ಶೇಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹನೀಫ್ ಕಾಟುಕಕ್ಕೆ ಸ್ವಾಗತಿಸಿ, ರಾಘವೇಂದ್ರ ನಾಯಕ್ ಶೇಣಿ ವಂದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries