HEALTH TIPS

ಏಮ್ಸ್ ಆಸ್ಪತ್ರೆ ಸ್ಥಾಪನೆಗೆ ಕಾಸರಗೋಡು ಸೇರ್ಪಡೆ: ಮೂರು ಜಿಲ್ಲೆಗಳಿಗೆ ಆದ್ಯತೆ ಪರಿಗಣನೆ

ಕಾಸರಗೋಡು: ಕೇಂದ್ರ ಸರ್ಕಾರದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಯನ್ನು ಕೇರಳದಲ್ಲಿ ಸ್ಥಾಪಿಸುವ ವಿಚಾರದಲ್ಲಿ ಕಾಸರಗೋಡು, ತ್ರಿಶೂರು ಮತ್ತು ಕೊಟ್ಟಾಯಂ ಜಿಲ್ಲೆಗಳನ್ನು ಮೊದಲ ಹಂತದ ಪರಿಗಣನಾ ಪಟ್ಟಿಯಲ್ಲಿ ಸೇರಿಸಲಾಗಿದೆ.


ಏಮ್ಸ್ ಸ್ಥಾಪನೆಗೆ ಸಂಬಂಧಿಸಿದಂತೆ ಈ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸಮಗ್ರ ವರದಿಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಈ ವರದಿ ರಾಜ್ಯ ಮುಖ್ಯಮಂತ್ರಿ ಅವರ ಸಕ್ರಿಯ ಪರಿಶೀಲನೆಯಲ್ಲಿದ್ದು, ಇದರ ಆಧಾರದಲ್ಲಿ ಕೇರಳದಲ್ಲಿ ಏಮ್ಸ್ ಸ್ಥಾಪಿಸುವ ಶಿಫಾರಸನ್ನು ಮುಖ್ಯಮಂತ್ರಿ ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವ ಕೆ. ಮುರಳೀಧರನ್ ತಿಳಿಸಿದ್ದಾರೆ.

ಕಾಸರಗೋಡು ಜಿಲ್ಲೆಯ ಪೆರಿಯ ಸಮೀಪದ ಪಣಯಾಲ್‌ನಲ್ಲಿ ರಾಜ್ಯ ತೋಟಗಾರಿಕಾ ನಿಗಮದ (ಪಿಸಿಕೆ) ಅಧೀನದಲ್ಲಿರುವ 274.69 ಎಕರೆ ಭೂಮಿಯನ್ನು ಏಮ್ಸ್ ಆಸ್ಪತ್ರೆ ಸ್ಥಾಪನೆಗಾಗಿ ಈಗಾಗಲೇ ಪರಿಗಣಿಸಲಾಗಿದ್ದು, ಸ್ಥಳ ಪರಿಶೀಲನೆಯನ್ನೂ ನಡೆಸಲಾಗಿದೆ.

ಇದರ ಜೊತೆಗೆ ತ್ರಿಶೂರು ಜಿಲ್ಲೆಯ ಚಾಲಕ್ಕುಡಿ ಹಾಗೂ ಕೊಟ್ಟಾಯಂ ಜಿಲ್ಲೆಯ ವಾರ್ಜುಪ್ಪಳ್ಳಿಯಲ್ಲಿರುವ 487.31 ಎಕರೆ ಭೂಮಿಯನ್ನೂ ಏಮ್ಸ್ ಸ್ಥಾಪನೆಗಾಗಿ ಪರಿಗಣಿಸಲಾಗಿದೆ.

ಏಮ್ಸ್ ಸ್ಥಾಪನೆಗೆ ಕನಿಷ್ಠ 200 ಎಕರೆ ಭೂಮಿ ಅಗತ್ಯವಿದೆ. ಆದರೆ, ತಿರುವನಂತಪುರಂ ಜಿಲ್ಲೆಯನ್ನು ಏಮ್ಸ್ ಸ್ಥಾಪನೆಗಾಗಿ ಪರಿಗಣಿಸಲಾಗುವುದಿಲ್ಲ ಎಂದು ಸಚಿವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.

ಆರೋಗ್ಯ ಕ್ಷೇತ್ರದಲ್ಲಿ ಹಿಂದುಳಿದಿರುವ ಜಿಲ್ಲೆಗಳಲ್ಲಿಯೇ ಏಮ್ಸ್ ಆಸ್ಪತ್ರೆ ಸ್ಥಾಪನೆಗೆ ಆದ್ಯತೆ ನೀಡಲಾಗುವುದು. ಕಲ್ಲಿಕೋಟೆ ಮತ್ತು ಆಲಪ್ಪುಳ ಜಿಲ್ಲೆಗಳಿಂದಲೂ ಏಮ್ಸ್ ಸ್ಥಾಪನೆಗೆ ಬೇಡಿಕೆಗಳು ಬಂದಿವೆ ಎಂದು ಸಚಿವರು ತಿಳಿಸಿದ್ದಾರೆ.

ಕಾಸರಗೋಡಿಗೆ ವಿಶೇಷ ಪರಿಗಣನೆಗೆ ಒತ್ತಾಯ

ಎಂಡೋಸಲ್ಫಾನ್ ದುಷ್ಪರಿಣಾಮಕ್ಕೆ ತುತ್ತಾಗಿರುವ ಜಿಲ್ಲೆಯಾಗಿರುವ ಕಾಸರಗೋಡಿನಲ್ಲಿ ಸುಸಜ್ಜಿತ ಆಸ್ಪತ್ರೆಗಳ ಕೊರತೆಯೂ ಕಾಡುತ್ತಿದೆ. ಇಲ್ಲಿನ ಜನರು ಚಿಕಿತ್ಸೆಗಾಗಿ ಇತರ ಜಿಲ್ಲೆ ಹಾಗೂ ರಾಜ್ಯಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿಯಿದೆ.

ಈ ಹಿನ್ನೆಲೆಯಲ್ಲಿ ಕಾಸರಗೋಡಿನಲ್ಲಿ ಏಮ್ಸ್ ಆಸ್ಪತ್ರೆ ಸ್ಥಾಪನೆಯಾದರೆ ಜಿಲ್ಲೆಯ ಜನರಿಗೆ ಮಾತ್ರವಲ್ಲದೆ ನೆರೆಯ ಪ್ರದೇಶಗಳ ಜನರಿಗೂ ಹೆಚ್ಚಿನ ಅನುಕೂಲವಾಗಲಿದೆ. ಆದ್ದರಿಂದ ಏಮ್ಸ್ ಸ್ಥಾಪನೆಯ ವಿಚಾರದಲ್ಲಿ ಕಾಸರಗೋಡು ಜಿಲ್ಲೆಗೆ ವಿಶೇಷ ಆದ್ಯತೆ ನೀಡಬೇಕೆಂದು ಜಿಲ್ಲೆಯ ಜನರು ಒತ್ತಾಯಿಸಿದ್ದಾರೆ.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries