HEALTH TIPS

ಕೇಂದ್ರ-ರಾಜ್ಯ ಸರ್ಕಾರಗಳ ಸವಲತ್ತುಗಳನ್ನು ಕೃಷಿಕರು ಸದುಪಯೋಗಪಡಿಸಿಕೊಳ್ಳಬೇಕು: ಸದಾನಂದ ಶೆಟ್ಟಿ

ಉಪ್ಪಳ: ಕೇಂದ್ರ-ರಾಜ್ಯ ಸರ್ಕಾರಗಳ ಸವಲತ್ತುಗಳನ್ನು ಕೃಷಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಕ್ಯಾಂಪ್ಕೋ ನಿರ್ದೇಶಕ ಮತ್ತು ತುಳುಸಿರಿ ಫಾರ್ಮರ್ಸ್ ಕಂಪನಿಯ ನೂತನ ಅಧ್ಯಕ್ಷ ಸದಾನಂದ ಶೆಟ್ಟಿ ಇತ್ತೀಚೆಗೆ ಜೋಡುಕಲ್ಲು ಫ್ರೆಂಡ್ಸ್ ಕ್ಲಬ್ ಸಭಾಂಗಣದಲ್ಲಿ ನಡೆದ ತುಳುಸಿರಿ ಫಾರ್ಮರ್ಸ್ ಕಂಪನಿಯ ವಾರ್ಷಿಕ ಮಹಾ ಸಭೆಯಂದು ಕರೆಯಿತ್ತರು. 


ನಿರ್ದೇಶಕ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತೋಡಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ನಿರ್ದೇಶಕ ಬಾಲಕೃಷ್ಣ ಶೆಟ್ಟಿ ಗತವರ್ಷದ ವರದಿ ವಾಚಿಸಿದರು.

ಮುಖ್ಯ ಅತಿಥಿಯಾಗಿ ಮಂಗಲ್ಪಾಡಿ ಕೃಷಿ ಭವನದ ಸಹಾಯಕ ಕೃಷಿ ಅಧಿಕಾರಿ ನಿಶಾಂತ್ ಕೃಷಿಕರ ಸಮಸ್ಯೆಗೆ  ಪರಿಹಾರ ಸೂಚಿಸಿದರು. ಪಿರಮಿಡ್ ಕಂಪನಿಯ ಸಂಚಾಲಕ ಜಯಪ್ರಕಾಶ್ ಕಂಪನಿಯ ನಿಯಮಗಳನ್ನು ತಿಳಿಸಿ ಸಂಸ್ಥೆಗೆ ಶುಭಹಾರೈಸಿದರು. ನಿರ್ಗಮಿತ ಅಧ್ಯಕ್ಷ ಅಶೋಕ್ ಕುಮಾರ್ ಹೊಳ್ಳ ತಾನು ನಿರ್ದೇಶಕನಾಗಿ ಮುಂದುವರಿದು ಎಲ್ಲಾ ಸಹಕಾರ ನೀಡುವವುದಾಗಿ ಭರವಸೆ ನೀಡಿದರು.ಸಂಸ್ಥೆಯ ಸದಸ್ಯರು ತೆಂಗು ಮಾರಾಟ, ಕೃಷಿ ಉಪಕರಣ ಮತ್ತು ಸಾವಯವ ರಾಸಾಯನಿಕ ಗೊಬ್ಬರ ವ್ಯವಹಾರಗಳನ್ನು ಸಂಸ್ಥೆಯಿಂದಲೇ ಮಾಡಬೇಕಾಗಿ ತಿಳಿಸಿದರು. ನಿರ್ದೇಶಕರಾದ ಶುಭಾನಂದ ಶೆಟ್ಟಿ, ಮೊಹಮ್ಮದ್ ಹಾರಿಸ್, ನಾರಾಯಣ ರೈ, ಅಬ್ದುಲ್ ರಫೀಕ್ ಉಪಸ್ಥಿತರಿದ್ದರು. ಜಯಂತಿ ಶೆಟ್ಟಿ ಪ್ರಾರ್ಥನಾ ಗೀತೆ ಹಾಡಿದರು. ನಿರ್ದೇಶಕ ರಂಜಿತ್ ಶೆಟ್ಟಿ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries