HEALTH TIPS

ಕನ್ನಡ ಭಾಷಾ ವಲಯಗಳಲ್ಲಿ ಬಿಪಿಸಿಯಾಗಿ ಕನ್ನಡ ಅಧ್ಯಾಪಕರನ್ನು ನೇಮಿಸಲು ಕನ್ನಡ ಅಧ್ಯಾಪಕರ ಸಂಘ ಆಗ್ರಹ: ಕನ್ನಡ ಭಾಷಾ ಅಲ್ಪಸಂಖ್ಯಾತರಿಗೆ ಮತ್ತೊಂದು ಹೊಡೆತ

ಉಪ್ಪಳ: ಎಸ್.ಎಸ್.ಕೆ.ಯ ನೇತೃತ್ವದಲ್ಲಿ ಶಿಕ್ಷಣ ಚಟುವಟಿಕೆಗಳನ್ನು ಜಾರಿಗೊಳಿಸುವ ಬಿಆರ್‍ಸಿಗಳಲ್ಲಿ ಬಿಪಿಸಿಗಳನ್ನು ನೇಮಕ ಮಾಡುವಾಗ ಭಾಷಾ ಅಲ್ಪಸಂಖ್ಯಾತ ವಲಯವಾದ ಮಂಜೇಶ್ವರ ಉಪ ಜಿಲ್ಲೆಯ ಬಿಆರ್‍ಸಿಯಲ್ಲಿ ಕನ್ನಡ ಮಾಧ್ಯಮ ಅಧ್ಯಾಪಕರನ್ನು ಪರಿಗಣಿಸದಿರುವುದರಲ್ಲಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಆರ್ಗನೈಸೇಷನ್ ಮಂಜೇಶ್ವರ ಉಪಜಿಲ್ಲಾ ಸಮಿತಿ ಪ್ರತಿಭಟಿಸಿದೆ. 


ಮಂಜೇಶ್ವರ ಉಪಜಿಲ್ಲೆಯ 90 ಶೇಕಡಾದಷ್ಟು ಶಾಲೆಗಳು ಭಾಷಾ ಅಲ್ಪಸಂಖ್ಯಾತ ವಲಯದಲ್ಲಿ ಕಾರ್ಯಾಚರಿಸುತ್ತಿದೆ. ಹೆಚ್ಚಿನ ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ ಕಲಿಯುವವರಾಗಿದ್ದಾರೆ. ಶಿಕ್ಷಣ ಗುಣಮಟ್ಟ ಖಚಿತಪಡಿಸುವುದಕ್ಕಾಗಿ ಸರ್ಕಾರ ಜಾರಿಗೊಳಿಸುವ ವಿವಿಧ ಯೋಜನೆಗಳು ಬಿಆರ್‍ಸಿ ಮೂಲಕ ಸಂಯೋಜಿಸಲಾಗುತ್ತಿದೆ. ಅಧ್ಯಾಪಕ ತರಬೇತಿ, ಎಸ್‍ಆರ್‍ಜಿ ಚಟುವಟಿಕೆಗಳು, ಡಾಟಾ ಸಂಗ್ರಹ, ತರಬೇತಿ ಕಾರ್ಯಕ್ರಮಗಳು ಮೊದಲಾದವುಗಳ ಸಂಯೋಜನೆಯಲ್ಲಿ ಬಿಪಿಸಿಗಳಿಗೆ ಪ್ರಧಾನ ಹೊಣೆಗಾರಿಕೆ ಇದೆ. ಕನ್ನಡ ಭಾಷೆಯಲ್ಲಿ ತಜ್ಞರಾಗಿರುವ ಅಧ್ಯಾಪಕರನ್ನೇ ಬಿಪಿಸಿಯಾಗಿ ನೇಮಕಗೊಳಿಸುವುದು ಈ ರೀತಿಯ ಚಟುವಟಿಕೆಗಳನ್ನು ದಕ್ಷತೆಯಿಂದ ನಿರ್ವಹಿಸಲು ಅನಿವಾರ್ಯವೆಂದು ಸಂಘಟನೆ ಅಭಿಪ್ರಾಯಪಟ್ಟಿದೆ. ಕನ್ನಡ ಭಾಷಾ ಪರಿಜ್ಞಾನವಿಲ್ಲದ ಬಿಪಿಸಿಗಳಿಗೆ ಭಾಷಾ ಅಲ್ಪಸಂಖ್ಯಾತ ವಲಯದ ಅಧ್ಯಾಪಕರೊಂದಿಗೆ, ವಿದ್ಯಾರ್ಥಿಗಳೊಂದಿಗೆ ಫಲಪ್ರದವಾಗಿ ಆಶಯ ವಿನಿಮಯ ನಡೆಸುವುದರಲ್ಲಿ ಪ್ರಾಯೋಗಿಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದೆಂದು ಸಂಘಟನೆ ಸ್ಪಷ್ಟಪಡಿಸಿದೆ.

ಭಾಷಾ ಅಲ್ಪ ಸಂಖ್ಯಾತವಲಯದ  ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದ ಭಾಷೆಯಲ್ಲಿ ಪ್ರಾವೀಣ್ಯತೆ ಇರುವವರನ್ನು ನೇಮಕಗೊಳಿಸಬೇಕೆಂಬ ನಿಲುವು ಸ್ಪಷ್ಟಪಡಿಸುವ ಸರ್ಕಾರಿ ಆದೇಶಗಳು, ನ್ಯಾಯಾಲಯದ ತೀರ್ಪುಗಳು ಜ್ಯಾರಿಯಲ್ಲಿದೆ ಎಂದು ಸಂಘಟನೆ ತಿಳಿಸಿದೆ. ಇವುಗಳಿಗೆ ವಿರುದ್ಧವಾಗಿ ಪ್ರಸ್ತುತ ಬಿಪಿಸಿ ನೇಮಕಾತಿ ಎಂದು ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಆರೋಪಿಸಿದೆ.

ಮಂಜೇಶ್ವರ ಬಿಆರ್‍ಸಿಯ ಶಿಕ್ಷಣ ಚಟುವಟಿಕೆಗಳನ್ನು ಸುಗಮವಾಗಿ, ಕಾರ್ಯದಕ್ಷತೆಯಿಂದ ಜಾರಿಗೊಳಿಸುವುದಕ್ಕಾಗಿ ಕನ್ನಡ ಮಾಧ್ಯಮ ಅಧ್ಯಾಪಕರನ್ನೇ ಬಿಪಿಸಿಯಾಗಿ ನೇಮಕಗೊಳಿಸಬೇಕೆಂದು ಸಂಘ ಆಗ್ರಹಿಸಿದೆ. ಈ ವಿಷಯ ಆಗ್ರಹಿಸಿ ಶಿಕ್ಷಣ ಸಚಿವ, ಮಂಜೇಶ್ವರ ಶಾಸಕ, ಎಸ್‍ಎಸ್‍ಕೆ ಸ್ಟೇಟ್ ಪ್ರೋಗ್ರಾಂ ಡೈರೆಕ್ಟರ್ ಅವರಿಗೆ ಸಂಘ ಮನವಿ ನೀಡಿದೆ. ಈ ಬೇಡಿಕೆಯನ್ನು ತುರ್ತಾಗಿ ಪರಿಹರಿಸಲು ಕ್ರಮ ಉಂಟಾಗದಿದ್ದರೆ ಪ್ರತ್ಯಕ್ಷ ಹೋರಾಟಕ್ಕೆ ಇಳಿಯುವುದಾಗಿಯೂ ಸಂಘದ ಅಧ್ಯಕ್ಷ ಅಶೋಕ ಕೊಡ್ಲಮೊಗರು, ಕಾರ್ಯದರ್ಶಿ ಸುನಿಲ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries