ಕಾಸರಗೋಡು: ಬಿಎಸ್ಸೆನ್ನೆಲ್ ದೂರವಾಣಿ ಕೇಬಲ್ ತುಂಡರಿಸಿ ಸಾಗಿಸಲೆತ್ನಿಸಿದ ಆರೋಪದಂತೆ ಅಸ್ಸಾಂ ನಿವಾಸಿಗಳಿಬ್ಬರನ್ನು ಪೆÇಲೀಸರು ಬಂಧಿಸಿದ್ದಾರೆ. ಅಸ್ಸಾಂ ನಿವಾಸಿಗಳಾದ ಶಾಹಿರುಲ್ ಇಸ್ಲಾಂ (39) ಮತ್ತು ಅಮೀರುಲ್ ಇಸ್ಲಾಂ (30) ಬಂಧಿತರು. ಭೀಮಾನದಿ ಸೇತುವೆ ಬಳಿ ಚಿತ್ತಾರಿಕ್ಕಲ್ ಪೆÇಲೀಸರು ವಾಹನದಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದ ವೇಳೆ ಸೇತುವೆ ಬಳಿ ಆರೋಪಿಗಳಿಬ್ಬರು ಕೇಬಲ್ ಕತ್ತರಿಸುತ್ತಿರುವುದನ್ನು ಕಂಡು ತಕ್ಷಣ ಅವರಿಬ್ಬರನ್ನು ಸೆರೆಹಿಡಿದಿದ್ದಾರೆ.

