ಮಧೂರು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಶ್ರೀ ಕೇಶವಾನಂದ ಭಾರತಿ ಸ್ಮೃತಿ ಮಂದಿರದಲ್ಲಿ ಅಕ್ಟೋಬರ್ 4ರಂದು ಬೆಳಗ್ಗೆ 9 ರಿಂದ ಕೆ.ಎಂ.ಸಿ.ಅತ್ತಾವರ ಮಂಗಳೂರು ಇವರ ವತಿಯಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಜರುಗಲಿದೆ.
ಹೆರಿಗೆ ಮತ್ತು ಸ್ತ್ರೀ ಆರೋಗ್ಯ ತಜ್ಞೆ ಡಾ.ರಾಜಲಕ್ಷ್ಮೀ ಉಡುಪಿ ಶಿಬಿರ ಉದ್ಘಾಟಿಸುವರು. ಮಧೂರು ಗ್ರಾಪಂ ಅಧ್ಯಕ್ಷೆ ಸುಜ್ಞಾನಿ ಶ್ಯಾನುಭೋಗ್ ಅಧ್ಯಕ್ಷತೆ ವಹಿಸುವರು. ಡಾ ಲಾವಣ್ಯ ಎಸ್. ಆರ್. ಭಟ್, ಡಾ ಗಣೇಶ ಕುಮಾರ ಕೆ. ಚೌಕಿ-ಅರ್ಜಾಲ್, ಡಾ. ಶ್ರೀವತ್ಸ ಕುಂಚಿನಡ್ಕ. ಭಾಗವಹಿಸುವರು.


