ಮುಳ್ಳೇರಿಯ: ಕೇರಳ ರಾಜ್ಯ ಪೆನ್ಶನರ್ಸ್ ಸಂಘ್ ಚೆಂಗಳ ಘಟಕದ ವತಿಯಿಂದ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ನಡೆಯಿತು. ಅಂತಾರಾಷ್ಟ್ರೀಯ ಖ್ಯಾತಿಯ ಜಲವರ್ಣ ಛಾಯಾ ಚಿತ್ರ ಕಲಾವಿದ ಪುಂಡೂರು ಶಂಕರ ನಾರಾಯಣ ಪುಣಿಂಚಿತ್ತಾಯ(ಪಿ.ಎಸ್.ಪುಣಿಚಿತ್ತಾಯ) ಅವರನ್ನು ಕಲಾಗ್ರಾಮ ಕಾಂಚನಗಂಗಾದಲ್ಲಿ ಅಭಿನಂದಿಸಿ ಗೌರವಿಸಲಾಯಿತು.
ಮೈಸೂರು ಜಯಚಾಮರಾಜೇಂದ್ರ ಕಾಲೇಜಿನಲ್ಲಿ ಬಿಎಫ್‍ಎ ಪೂರೈಸಿದ್ದ ಅವರು ಕೇರಳ ಕರ್ನಾಟಕ ಸಹಿತ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ತೊಡಗಿಕೊಂಡವರು. ಕೇರಳ ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯರಾಗಿದ್ದು ದೇಶವಿದೇಶಗಳಲ್ಲಿ ತನ್ನ ಛಾಯಾಚಿತ್ರಗಳನ್ನು ಪ್ರದರ್ಶನ ನಡೆಸಿದ ಹಿರಿಮೆ ಇವರದು. ಪ್ರಸ್ತುತ ಆರೋಗ್ಯ ಕಾರಣಗಳಿಗಾಗಿ ಸ್ವರ್ಗರಹದಲ್ಲಿ ವಿಶ್ರಾಂತಿಯಲ್ಲಿದ್ದು, ಕಲಾಗ್ರಾಮದಲ್ಲೇ ವಾಸಿಸುತ್ತಿದ್ದಾರೆ. ತಮ್ಮ ಛಾಯಾ ಚಿತ್ರ ಹಾಗೂ ವಿವಿಧ ಪೈಂಟಿಂಗ್‍ಗಳ ಬಗ್ಗೆ ವಿವರಿಸುತ್ತಾ ಅಂತಾರಾಷ್ಟ್ರೀಯ ಮಟ್ಟದ ವರೆಗಿನ ಖ್ಯಾತಿಯನ್ನು ಸ್ಮರಿಸಿದರು. ಕೇರಳ ರಾಜ್ಯಸಮಿತಿ ಸದಸ್ಯ ಶ್ರೀಧರ್ ಭಟ್ ಕಾಸರಗೋಡು, ಜಿಲ್ಲಾ ಉಪಾಧ್ಯಕ್ಷ ಸೀತಾರಾಮ ರಾವ್, ಕಾಸರಗೋಡು ಬ್ಲಾಕ್ ಅಧ್ಯಕ್ಷ ಸೂರ್ಯನಾರಾಯಣ ಭಟ್, ಚೆಂಗಳ ಘಟಕ ಅಧ್ಯಕ್ಷ ವೆಂಕಟರಮಣ ಕೆದಿಲಾಯ ಪಾಲ್ಗೊಂಡಿದ್ದರು. ಪ್ರವೀಣ್ ಪುಣಿಂಚಿತ್ತಾಯ ಉಪಸ್ಥಿತರಿದ್ದರು. ನಿವೃತ್ತ ಅಧ್ಯಾಪಕ ಕೃಷ್ಣೋಜಿ ರಾವ್ ಕಾರ್ಯಕ್ರಮ ನಿರೂಪಿಸಿದರು.

.jpg)
