HEALTH TIPS

ಸಿಜೆಪಿ ನಾಯಕರ ಬಿಡುಗಡೆ: ಶಾಂತಿ ಕದಡದಂತೆ ಷರತ್ತು

ನವದೆಹಲಿ: ಸಿಜೆಪಿ ನಾಯಕರಾದ ಅಭಿಜಿತ್ ದೀಪ್ಕೆ, ಆಶುತೋಷ್ ರಾಂಕಾ ಹಾಗೂ ಸೌರವ್ ದಾಸ್ ಅವರಿಗೆ ಒಂದು ವರ್ಷ ಶಾಂತಿ ಕದಡಕೂಡದು ಎಂಬ ಷರತ್ತು ವಿಧಿಸಿ, ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್‌ ಭಾನುವಾರ ಬಿಡುಗಡೆ ಮಾಡಿದ್ದಾರೆ.


ಒಂದು ವರ್ಷದವರೆಗೆ ಶಾಂತಿ ಮತ್ತು ಸನ್ನಡತೆ ಕಾಪಾಡುವ ಷರತ್ತು ಮತ್ತು ₹50,000 ಜಾಮೀನಿನ ಬಾಂಡ್‌ ಮೇರೆಗೆ ಅವರನ್ನು ನ್ಯಾಯಾಲಯ ಬಿಡುಗಡೆ ಮಾಡಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. 

ಈ ಮೂವರು ನಾಯಕರ ಬಿಡುಗಡೆಯು ದೊಡ್ಡ ಕಾನೂನು ಗೆಲುವು ಎಂದು ಸಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ. 'ಅಂತಿಮವಾಗಿ ದೆಹಲಿ ಪೊಲೀಸರು ನಮ್ಮ ಮೂವರೂ ನಾಯಕರನ್ನು ಬಿಡುಗಡೆ ಮಾಡಿದ್ದಾರೆ. ಕಾಕ್ರೋಚ್‌ಗಳು ಎಂದಿಗೂ ಸಾಯುವುದಿಲ್ಲ' ಎಂದು ಸಿಜೆಪಿ 'ಎಕ್ಸ್‌'ನಲ್ಲಿ ಹೇಳಿದೆ.

ಪ್ರತಿಭಟಿಸಲ್ಲ ಎಂದು ಮುಚ್ಚಳಿಕೆ ನೀಡಿಲ್ಲ: ದೀಪ್ಕೆ

ನಾಗ್ಪುರ (ಪಿಟಿಐ): 'ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್‌ ಕುಮಾರ್‌ ಅವರನ್ನು ಹುದ್ದೆಯಿಂದ ಕೆಳಗಿಳಿಸುವಂತೆ ಒತ್ತಾಯಿಸಿ ಇನ್ನು ಮುಂದೆ ಪ್ರತಿಭಟಿಸುವುದಿಲ್ಲ ಎಂದು ಹೇಳುವ ಯಾವುದೇ ಮುಚ್ಚಳಿಕೆ ಪತ್ರಕ್ಕೆ ನಾನು ಅಥವಾ ಸಿಜೆಪಿಯ ನಾಯಕರು ಸಹಿ ಹಾಕಿಲ್ಲ' ಎಂದು ಕಾಕ್ರೋಚ್‌ ಜನತಾ ಪಾರ್ಟಿಯ ಸ್ಥಾಪಕ ಅಭಿಜಿತ್‌ ದೀಪ್ಕೆ ಭಾನುವಾರ ಹೇಳಿದರು.

'ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರಿಗೆ ನಾವು ಹೆದರುವುದಿಲ್ಲ. ಮತ್ತೆ ಬೀದಿಗಿಳಿದು ಹೋರಾಡುತ್ತೇವೆ' ಎಂದು ಅವರು ನಾಗ್ಪುರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

'ನನ್ನನ್ನು ನೂರು ಬಾರಿ ಜೈಲಿಗೆ ಹಾಕಿದರೂ ನಿಮ್ಮ ಸರ್ವಾಧಿಕಾರಕ್ಕೆ ಹೆದರುವುದಿಲ್ಲ. ನಾವು ಈ ಸರ್ವಾಧಿಕಾರವನ್ನು ಅಂತ್ಯಗೊಳಿಸುತ್ತೇವೆ' ಎಂದು ದೀಪ್ಕೆ ಎಚ್ಚರಿಸಿದರು.

'ನನ್ನನ್ನು ಅಪಹರಿಸಿದ್ದರು': ಧ್ರುವ ರಾಠಿ

ನವದೆಹಲಿ (ಪಿಟಿಐ): 'ಸಿವಿಲ್‌ ಉಡುಪಿನಲ್ಲಿದ್ದ ಕೆಲ ವ್ಯಕ್ತಿಗಳು ನನ್ನನ್ನು ಮನೆಯಿಂದಲೇ ಅ‍ಪಹರಿಸಿ ವಿವಿಧ ಠಾಣೆಗಳಿಗೆ ಕರೆದೊಯ್ದರು' ಎಂದು ಯೂಟ್ಯೂಬರ್‌ ಧ್ರುವ ರಾಠಿ ಭಾನುವಾರ ಆರೋಪ ಮಾಡಿದ್ದಾರೆ.

'ಶನಿವಾರ ಬೆಳಿಗ್ಗೆ ಮನೆಯಲ್ಲಿ ಮಲಗಿದ್ದಾಗ ನುಗ್ಗಿದ ಸುಮಾರು 20 ಜನರು ನನ್ನನ್ನು ಕರೆದೊಯ್ದರು. ಈ ವೇಳೆ ನನಗೆ ಕೆಲ ಗಾಯಗಳೂ ಆಗಿವೆ. 22-23 ಗಂಟೆ ವಕೀಲರನ್ನು ಸಂಪರ್ಕಿಸಲು, ಫೋನ್‌ ಬಳಸಲು ಅವಕಾಶ ನೀಡಲಿಲ್ಲ' ಎಂದು ಅವರು 'ಎಕ್ಸ್‌'ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ತಿಳಿಸಿದ್ದಾರೆ.

'ಸಿಇಸಿ ವಿರುದ್ಧದ ಪ್ರತಿಭಟನೆಗೂ ಮುನ್ನ ವಿಧಿಸಲಾದ ನಿರ್ಬಂಧಗಳನ್ನು ಗಮನಿಸಿದರೆ ಇದು ಅನಧಿಕೃತ ತುರ್ತು ಪರಿಸ್ಥಿತಿ ಎಂಬಂತೆ ಭಾಸವಾಗುತ್ತಿದೆ' ಎಂದಿರುವ ಅವರು, ದೇಶಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಧ್ವನಿ ಎತ್ತುವುದನ್ನು ಮುಂದುವರಿಸುವುದಾಗಿ ಪ್ರತಿಪಾದಿಸಿದ್ದಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries