HEALTH TIPS

ಅಮೆರಿಕ ಅಧ್ಯಕ್ಷ ಟ್ರಂಪ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ ಸ್ವಿಸ್ ರೂಪದರ್ಶಿ

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಸ್ವಿಟ್ಜರ್ಲೆಂಡ್‌ನ ಮಾಜಿ ರೂಪದರ್ಶಿ ಹಾಗೂ 'ಮಿಸ್ ಸ್ವಿಟ್ಜರ್ಲೆಂಡ್' ಸ್ಪರ್ಧಿ ಬೀಟ್ರಿಸ್ ಕ್ಯೂಲ್ ಅತ್ಯಾಚಾರದ ಆರೋಪ ಮಾಡಿದ್ದಾರೆ.


1993ರ ನವೆಂಬರ್‌ನಲ್ಲಿ ನ್ಯೂಯಾರ್ಕ್‌ನ ಪ್ಲಾಜಾ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ. 

ಈ ಕುರಿತು 'ದಿ ಟೆಲಿಗ್ರಾಫ್' ವರದಿ ಮಾಡಿದೆ.

ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್ ಜೊತೆಗಿನ ಟ್ರಂಪ್ ನಂಟು ಕುರಿತು ಅಮೆರಿಕದ ಹೌಸ್ ಜ್ಯುಡಿಷಿಯರಿ ಕಮಿಟಿಯ ಡೆಮಾಕ್ರಟಿಕ್ ಸದಸ್ಯರು ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಅಂಶ ಬಹಿರಂಗವಾಗಿದೆ.

ಘಟನೆ ನಡೆದಾಗ ಬೀಟ್ರಿಸ್ ಅವರಿಗೆ 24 ವರ್ಷ ವಯಸ್ಸಾಗಿತ್ತು. ಈ ಹಿಂದೆ ಟ್ರಂಪ್ ಅಸಭ್ಯವಾಗಿ ವರ್ತಿಸಿದ್ದರು ಎಂದು ಬಹಿರಂಗವಾಗಿಯೇ ಆರೋಪಿಸಿದ್ದರು.

ಆದರೆ, ಇತ್ತೀಚಿನ ಹೇಳಿಕೆಯಲ್ಲಿ, ಅಂದಿನ ಘಟನೆ ಕೇವಲ ಅಸಭ್ಯ ವರ್ತನೆಗೆ ಸೀಮಿತವಾಗಿರಲಿಲ್ಲ, ಅದು ಅತ್ಯಾಚಾರವಾಗಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ.

ಆದರೆ, ಈ ಆರೋಪಗಳನ್ನು ಶ್ವೇತಭವನ ತಳ್ಳಿಹಾಕಿದ್ದು, ಇದೊಂದು 'ರಾಜಕೀಯ ಪ್ರೇರಿತ' ವರದಿ ಎಂದು ಹೇಳಿದೆ. ಅಲ್ಲದೆ ಈವರೆಗೆ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗಿಲ್ಲ. 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries