HEALTH TIPS

ಆಂಥ್ರೋಪಿಕ್ ಸಂಸ್ಥೆಯ ಕ್ಲಾಡ್ ಎಐನಿಂದ ಭದ್ರತಾ ಲೋಪ: ಅಮೆರಿಕದ ಚುನಾವಣಾ ಡೇಟಾ ಪ್ರವೇಶಿಸಿ ಶಾಕ್!

ಜಾಗತಿಕ ತಂತ್ರಜ್ಞಾನ ಲೋಕದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಸುರಕ್ಷತೆ ಮತ್ತು ಸೈಬರ್ ಭದ್ರತೆಯ ಕುರಿತು ದೊಡ್ಡ ಆತಂಕವೊಂದು ಎದುರಾಗಿದೆ. ಪ್ರಮುಖ ಎಐ ಸಂಸ್ಥೆಯಾದ ಆಂಥ್ರೋಪಿಕ್ (Anthropic) ಅಭಿವೃದ್ಧಿಪಡಿಸಿರುವ 'ಕ್ಲಾಡ್ ' (Claude AI) ಚಾಟ್‌ಬಾಟ್ ಯಾವುದೇ ಮಾನವನ ಆದೇಶವಿಲ್ಲದೆ ಆಟೋಮೆಟಿಕ್​ ಆಗಿ ಅಮೆರಿಕದ ಜಾರ್ಜಿಯಾ ರಾಜ್ಯದ ಚುನಾವಣಾ ಮತದಾನದ ಗೇಟೆಡ್ ಡೇಟಾವನ್ನು ಪ್ರವೇಶಿಸಿದೆ ಎಂದು ಪ್ರಸಿದ್ಧ ಮಾಧ್ಯಮ ಸಂಸ್ಥೆ 'ಆಕ್ಸಿಯೋಸ್' (Axios) ವರದಿ ಮಾಡಿದೆ. ಸಾರ್ವಜನಿಕರಿಗೆ ನಿಗದಿತ ಶುಲ್ಕದ (Fee) ಆಧಾರದ ಮೇಲೆ ಲಭ್ಯವಿರುವ ಜಾರ್ಜಿಯಾ ರಾಜ್ಯದ ಒಟ್ಟಾರೆ ಮತದಾರರ ಸಂಖ್ಯೆಯ ಡೇಟಾವನ್ನು ಕ್ಲಾಡ್ ಎಐ ಪೇವಾಲ್ (Paywall) ಬೈಪಾಸ್ ಮಾಡುವ ಮೂಲಕ ಅನಧಿಕೃತವಾಗಿ ಪಡೆದುಕೊಂಡಿದೆ.


ಅಮೆರಿಕದಲ್ಲಿ ಮುಂಬರುವ ಮಧ್ಯಂತರ ಚುನಾವಣೆಗಳ (Midterm Elections) ಹಿನ್ನೆಲೆಯಲ್ಲಿ ಈ ಬೆಳವಣಿಗೆಯು ಭಾರಿ ಸಂಚಲನ ಮೂಡಿಸಿದ್ದು, ಚುನಾವಣಾ ವ್ಯವಸ್ಥೆಯಲ್ಲಿ ಎಐ ಸುರಕ್ಷತೆಯ ಕುರಿತಾದ ಆತಂಕಗಳನ್ನು ಮತ್ತಷ್ಟು ಹೆಚ್ಚಿಸಿದೆ. ಈ ಹೈ-ಟೆಕ್ ಸೈಬರ್ ಘಟನೆಯ ಸಂಪೂರ್ಣ ವಿವರ ಇಲ್ಲಿದೆ.

ಆಟೋಮೆಟಿಕ್​ ಆಗಿ ಟೋಕನ್ ಪಡೆದ ಕ್ಲೋಡ್ ಎಐ: ಆಂಥ್ರೋಪಿಕ್ ಸಂಸ್ಥೆಯ ವಕ್ತಾರರು ಈ ಕುರಿತು ಅಧಿಕೃತ ಪ್ರಕಟಣೆ ನೀಡಿದ್ದು, "ನಮ್ಮ ಆಂತರಿಕ ಸಾಂಖ್ಯಿಕ ಪ್ರಾಜೆಕ್ಟ್ (Statistics Project) ಒಂದರ ತರಬೇತಿಯ ಅವಧಿಯಲ್ಲಿ ಸಾರ್ವಜನಿಕ ಡೇಟಾವನ್ನು ಪಡೆಯಲು ಕ್ಲಾಡ್ ಎಐ ಅನ್ನು ಬಳಸಲಾಗುತ್ತಿತ್ತು. ಆದರೆ ಯಾವುದೇ ಮಾನವನ ಸೂಚನೆ ಇಲ್ಲದೆಯೇ (Without being asked to) ಈ ಎಐ ಮಾಡೆಲ್ ಶುಲ್ಕ ಪಾವತಿಸಿ ಪಡೆಯಬೇಕಾದ ಡ್ಯಾಶ್‌ಬೋರ್ಡ್ ಅನ್ನು ಪ್ರವೇಶಿಸಲು ಸ್ವಯಂಚಾಲಿತವಾಗಿ ಡಿಜಿಟಲ್ ಟೋಕನ್ ಒಂದನ್ನು ವಿನಂತಿಸಿ, ಪೇವಾಲ್ ಅನ್ನು ಬೈಪಾಸ್ ಮಾಡಿದೆ" ಎಂದು ಒಪ್ಪಿಕೊಂಡಿದ್ದಾರೆ.

ಆದರೆ ಜಾರ್ಜಿಯಾ ರಾಜ್ಯದ ಅಧಿಕಾರಿಗಳು ಮತ್ತು ಆಂಥ್ರೋಪಿಕ್ ಸಂಸ್ಥೆ ನೀಡಿರುವ ಸ್ಪಷ್ಟನೆಯ ಪ್ರಕಾರ, ಕ್ಲಾಡ್ ಎಐ ಮಾದರಿಯು ರಾಜ್ಯದ ಮುಖ್ಯ ಮತದಾರರ ನೋಂದಣಿ ವ್ಯವಸ್ಥೆಯನ್ನು (Voter Registration System) ಹ್ಯಾಕ್ ಮಾಡಿಲ್ಲ ಅಥವಾ ಯಾವುದೇ ಮತದಾನದ ದಾಖಲೆಗಳನ್ನು ಬದಲಾಯಿಸಿಲ್ಲ ಹಾಗೂ ವೈಯಕ್ತಿಕ ಮತದಾನದ ದಾಖಲೆಗಳನ್ನು ಕದ್ದಿಲ್ಲ. ಕೇವಲ ಸಾರ್ವಜನಿಕವಾಗಿ ಹಣ ಕೊಟ್ಟು ನೋಡಬೇಕಾದ ಅಂಕಿ-ಅಂಶಗಳ ಡೇಟಾವನ್ನು ಮಾತ್ರ ಬೈಪಾಸ್ ಮಾಡಿದೆ ಎಂದು ಹೇಳಿದ್ದಾರೆ.

ವೈಟ್ ಹೌಸ್ ಮತ್ತು ರಾಜ್ಯ ಸರ್ಕಾರಕ್ಕೆ ಮೊದಲೇ ಮಾಹಿತಿ: ಡಾರಿಯೋ ಅಮೊಡೆಯ್ ನೇತೃತ್ವದ ಆಂಥ್ರೋಪಿಕ್ ಸಂಸ್ಥೆಯು ಈ ತಾಂತ್ರಿಕ ಲೋಪದ ಬಗ್ಗೆ ಕೆಲವು ವಾರಗಳ ಹಿಂದೆಯೇ ಜಾರ್ಜಿಯಾದ ಸೆಕ್ರೆಟರಿ ಆಫ್ ಸ್ಟೇಟ್ ಕಚೇರಿ ಮತ್ತು ಅಮೆರಿಕದ ಅಧ್ಯಕ್ಷರ ಅಧಿಕೃತ ನಿವಾಸವಾದ ವೈಟ್ ಹೌಸ್‌ಗೆ (White House) ರಹಸ್ಯವಾಗಿ ಮಾಹಿತಿ ನೀಡಿತ್ತು. ಮೂಲಗಳ ಪ್ರಕಾರ, ಜೋ ಬೈಡನ್ ಆಡಳಿತದ ಅಧಿಕಾರಿಗಳು ಈ ಸುರಕ್ಷತಾ ಲೋಪವನ್ನು ಸಾರ್ವಜನಿಕವಾಗಿ ಬೇಗನೇ ಬಹಿರಂಗಪಡಿಸುವಂತೆ ಜಾರ್ಜಿಯಾ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದರು. ಆದರೆ ರಾಜ್ಯ ಸರ್ಕಾರ ಆ ಮನವಿಯನ್ನು ನಿರ್ಲಕ್ಷಿಸಿತ್ತು ಎನ್ನಲಾಗಿದೆ.

ಈ ಘಟನೆ ನಡೆಯುವ ಕೇವಲ ಒಂದು ತಿಂಗಳ ಮುಂಚೆಯಷ್ಟೇ ಆಂಥ್ರೋಪಿಕ್ ಸಂಸ್ಥೆಯು ಬ್ಲಾಗ್ ಪೋಸ್ಟ್ ಒಂದರಲ್ಲಿ ಕ್ಲಾಡ್ ಎಐನ ಇಂತಹದ್ದೇ ಕೆಲವು ಆಟೋಮೆಟಿಕ್​ ಹ್ಯಾಕಿಂಗ್ ಮಾದರಿಯ ನಡವಳಿಕೆಗಳ ಬಗ್ಗೆ ಎಚ್ಚರಿಸಿತ್ತು. "ಸರ್ವರ್‌ಗಳು ಕ್ಲೌಡ್‌ನ ವಿನಂತಿಯನ್ನು ತಿರಸ್ಕರಿಸಿದಾಗ ಅಥವಾ ಡೇಟಾವನ್ನು ಕೇವಲ ಶುಲ್ಕದ ಆಧಾರದ ಮೇಲೆ ನೀಡಿದಾಗ ಕ್ಲಾಡ್ ಎಐ ಕೆಲವು ನಿರ್ಬಂಧಗಳನ್ನು ಮೀರಿ, ತನಗೆ ಪ್ರವೇಶವಿಲ್ಲದ ಡೇಟಾವನ್ನು ಪಡೆಯಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ" ಎಂದು ಕಂಪನಿ ಹೇಳಿತ್ತು. ಇಂತಹ ಘಟನೆಗಳು ಅಮೆರಿಕದ ಫೆಡರಲ್, ರಾಜ್ಯ ಮತ್ತು ಸ್ಥಳೀಯ ಮಟ್ಟದ ಸರ್ಕಾರಿ ಏಜೆನ್ಸಿಗಳ ವೆಬ್‌ಸೈಟ್‌ಗಳಲ್ಲೂ ನಡೆದಿವೆ.

ಭವಿಷ್ಯದ ಭದ್ರತೆಗೆ ಕೈಗೊಂಡ ಕ್ರಮಗಳು: ಎಐ ತಂತ್ರಜ್ಞಾನಗಳು ಮಾನವನ ನಿಯಂತ್ರಣವಿಲ್ಲದೆ ಸ್ವತಂತ್ರವಾಗಿ ಪಾವತಿ ವ್ಯವಸ್ಥೆಗಳನ್ನು ಬೈಪಾಸ್ ಮಾಡುತ್ತಿರುವುದು ಸೈಬರ್ ಭದ್ರತಾ ತಜ್ಞರಲ್ಲಿ ನಡುಕ ಹುಟ್ಟಿಸಿದೆ. ಭವಿಷ್ಯದಲ್ಲಿ ಇಂತಹ ಅಪಾಯಕಾರಿ ಸ್ವಯಂಚಾಲಿತ ಕ್ರಮಗಳನ್ನು ತಡೆಯಲು ಮತ್ತು ಎಐ ಭದ್ರತೆಯನ್ನು ಬಲಪಡಿಸಲು ಈಗಾಗಲೇ ತಾಂತ್ರಿಕ ಪರಿಹಾರಗಳನ್ನು (Mitigations) ಜಾರಿಗೆ ತರಲಾಗಿದೆ ಮತ್ತು ಇಂತಹ ಕ್ರಮಗಳನ್ನು ಸಂಪೂರ್ಣವಾಗಿ ಬ್ಲಾಕ್ ಮಾಡಲಾಗಿದೆ ಎಂದು ಆಂಥ್ರೋಪಿಕ್ ತಿಳಿಸಿದೆ. ಆದರೂ ಚುನಾವಣೆಗಳ ಹೊತ್ತಿನಲ್ಲಿ ಎಐ ತಂತ್ರಜ್ಞಾನದ ಇಂತಹ ನಡವಳಿಕೆ ಜಾಗತಿಕವಾಗಿ ಚರ್ಚೆಗೆ ಗ್ರಾಸವಾಗಿದೆ.





 

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries