ಕುಂಬಳೆ: ಸೂರಂಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು. ಮುಖ್ಯೋಪಾಧ್ಯಾಯಿನಿ ಸುನೀತ ಎ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿರಿಯ ಶಿಕ್ಷಕಿ ಗೀತ ಕಂಚಿಕಟ್ಟೆ, ಶಾಲಾ ನೌಕರ ಸಂಘದ ಕಾರ್ಯದರ್ಶಿ ಶರತ್ ಕುಮಾರ್ ಬೇಳ, ಸಮಾಜ ವಿಜ್ಞಾನ ಕ್ಲಬ್ ನ ರಾಧಾಕೃಷ್ಣ ಬಂಬ್ರಾಣ ಮಾತನಾಡಿದರು. ಶಾಲಾ ನಾಯಕ ಗಿರಿಧರ ಎಸ್ ಕೆ ನೇತೃತ್ವ ನೀಡಿದರು. ಶಾಲಾ ಪರಿಸರ ಶುಚೀಕರಣ ನಡೆಸಿ ಸಿಹಿತಿಂಡಿ ವಿತರಿಸಲಾಯಿತು.

.jpeg)
.jpeg)
