ಮುಳ್ಳೇರಿಯ: ಚೆರ್ಕಳ ಬೇವಿಂಜೆ ಮಯಂಗರ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಡಿಸಂಬರ್ 18 ರಿಂದ 27 ರತನಕ ಜರಗಲಿರುವ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಕಾರ್ಯಕಾರೀ ಸಮಿತಿಯ ಸಭೆ ಜರಗಿತು. ಪ್ರಧಾನ ಕಾರ್ಯದರ್ಶಿ ಗಿರಿಧರನ್ ದಿಕ್ಸೂಚಿ ಮಾತುಗಳನ್ನಾಡಿ ಸಮಗ್ರ ಮಾಹಿತಿಗಳನ್ನಿತ್ತರು.
ಸಭೆಯಲ್ಲಿ ಗೋವಿಂದ ಬಳ್ಳಮೂಲೆ ಅಧ್ಯಕ್ಷತೆ ವಹಿಸಿ ವಿವಿಧ ಉಪಸಮಿತಿಗಳ ಕಾರ್ಯಾಚರಣೆಗಳ ಕುರಿತು ವಿವರಣೆಗಳನ್ನಿತ್ತರು. ನವೀಕರಣ ಸಮಿತಿ ಅಧ್ಯಕ್ಷ ಬಿ.ವಿ. ಕಕ್ಕಿಲ್ಲಾಯ ಯೋಜನೆಗಳ ಬಗ್ಗೆ ಮಾಹಿತಿಗಳನ್ನು ನೀಡಿದರು. ವಾರ್ಡ್ ಸದಸ್ಯೆ ಜಯಕುಮಾರಿ, ಕೃಷ್ಣಪ್ರಸಾದ್ ಕೋಟೆಕಣ್ಣಿ, ಬಿ.ಕೆ. ವಿಜಯನ್ ಸಲಹೆ ಸೂಚನೆಗಳನ್ನಿತ್ತರು. ಆಡಳಿತಾಧಿಕಾರಿ ವಿಷ್ಣುಮೂರ್ತಿ ಕಕ್ಕಿಲ್ಲಾಯ, ಗೋಪಾಲಕೃಷ್ಣ ಕಕ್ಕಿಲ್ಲಾಯ, ಡಾ ಶ್ರೀಕಾಂತ್ ಕಕ್ಕಿಲ್ಲಾಯ ಮಾರ್ಗದರ್ಶನಗಳನ್ನಿತ್ತರು. ವಿವಿಧ ಉಪಸಮಿತಿಗಳ ಸಂಚಾಲಕರು ಕಾರ್ಯ ವಿಧಾನಗಳ ಬಗ್ಗೆ ಮಾತುಗಳನ್ನಾಡಿದರು. ಕಾರ್ಯದರ್ಶಿ ರವಿ ಬೇವಿಂಜೆ ವಂದಿಸಿದರು.

.jpg)
