HEALTH TIPS

ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ ವಾರ್ಷಿಕ ಮಹಾಸಭೆ

ಬದಿಯಡ್ಕ: ಪೆರಡಾಲ ಸೇವಾ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆ ಶನಿವಾರ ನೀರ್ಚಾಲು ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಜರಗಿತು. ಅಧ್ಯಕ್ಷ ಗಣಪತಿ ಪ್ರಸಾದ್ ಕುಳಮರ್ವ ಅಧ್ಯಕ್ಷತೆ ವಹಿಸಿದ್ದರು. 2026ನೇ ಮಾರ್ಚ್ 31ರ ತನಕದ ಹಣಕಾಸು ವರ್ಷದಲ್ಲಿ 297.93 ಕೋಟಿ ರೂ. ವ್ಯವಹಾರವನ್ನು ನಡೆಸಿದ್ದು, ವಾರ್ಷಿಕ ಅಂಕಿ ಅಂಶಗಳ ಪ್ರಕಾರ ಬ್ಯಾಂಕ್ 84.20 ಲಕ್ಷ ರೂಗಳ ನಿರ್ವಹಣಾ ಲಾಭವನ್ನು ಗಳಿಸಿದೆ. ಈ ನಿಟ್ಟಿನಲ್ಲಿ ಸದಸ್ಯರಿಗೆ ಶೇ.15 ಲಾಭಾಂಶವನ್ನು ಘೋಷಿಸಲಾಗಿದೆ. 

ನಿರ್ದೇಶಕರುಗಳಾದ ವಿ. ಶ್ರೀಕೃಷ್ಣ ಭಟ್ ವಳಕ್ಕುಂಜ, ರವಿ.ಕೆ ನೀರ್ಚಾಲು, ಶ್ಯಾಮ ಭಟ್ ಕೆ.ಮಲ್ಲಡ್ಕ, ಸುಬ್ರಹ್ಮಣ್ಯ ವೈ. ಏನಂಕೂಡ್ಲು, ಸ್ಮಿತಾ ವಿ.ಶೆಟ್ಟಿ ಬೇಳ, ವಿದ್ಯಾಶಂಕರಿ ವಾಶೆ, ರಾಮಪ್ಪ ಮಂಜೇಶ್ವರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ವಿಷ್ಣು ಶರ್ಮ ಪಟ್ಟಾಜೆ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ಅವಿನಾಶ್ ರೈ ವಂದಿಸಿದರು. ಸದಸ್ಯರು, ಜನಪ್ರತಿನಿಧಿಗಳು, ಬ್ಯಾಂಕಿನ ಸಿಬ್ಬಂದಿಗಳು ಪಾಲ್ಗೊಂಡಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries