ಮಧೂರು: ಉಚಿತ ವೈದ್ಯಕೀಯ ಶಿಬಿರ ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಸಾಂಸ್ಕøತಿಕ ಪ್ರತಿಷ್ಠಾನದ ಶ್ರೀ ಕೇಶವಾನಂದ ಭಾರತಿ ಸ್ಮೃತಿ ಮಂದಿರದಲ್ಲಿ ಜರುಗಿತು. ಮಂಗಳೂರು ಕೆ.ಎಂ.ಸಿ.ಅತ್ತಾವರ ವತಿಯಿಂದ ಉಚಿತ ವೈದ್ಯಕೀಯ ಶಿಬಿರ ಆಯೋಜಿಸಲಾಗಿತ್ತು. ಖ್ಯಾತ ಸ್ತ್ರೀರೋಗ ತಜ್ಞೆ ಹಾಗೂ ಲೇಖಕಿ ಡಾ. ರಾಜಲಕ್ಷ್ಮೀ ಶಿಬಿರ ಉದ್ಘಾಟಿಸಿದರು. ಮಧೂರು ಗ್ರಾಮ ಪಂಚಯಿತಿ ಅಧ್ಯಕ್ಷೆ ಸುಜ್ಞಾನಿ ಶ್ಯಾನುಭೋಗ್ ಅಧ್ಯಕ್ಷತೆ ವಹಿಸಿದ್ದರು.
ಡಾ. ಲಾವಣ್ಯ ಎಸ್.ಆರ್ ಭಟ್, ಡಾ ಗಣೇಶ ಕುಮಾರ ಕೆ. ಚೌಕಿ-ಅರ್ಜಾಲ್, ಡಾ. ಶ್ರೀವತ್ಸ ಕುಂಚಿನಡ್ಕ. ಅತಿಥಿಗಳಾಗಿ ಭಾಗವಹಿಸಿದರು. ತಜ್ನ ವೈದ್ಯರಾದ-ಡಾ ಲಾವಣ್ಯ ಎಸ್. ಆರ್. ಭಟ್ ಮತ್ತು ತಂಡದವರು ರೋಗಿಗಳ ತಪಾಸಣೆ ನಡೆಸಿದರು. ಉದಯ ಜೆ. ಭಟ್, ಲಿಂಗಮ್ಮ ಕೃಷ್ಣ ಕಳಾಯಿ, ಪುಷ್ಪಾ, ರಮ್ಯ ಮೊದಲಾದವರು ಶಿಬಿರದ ನೇತೃತ್ವ ವಹಿಸಿದರು. ಪ್ರತಿಷ್ಠಾನದ ಅದ್ಯಕ್ಷರಾದ ರಾಮಕೃಷ್ಣ ಮಯ್ಯ ಸ್ವಾಗತಿಸಿದರು. ಶ್ರೀರಾಜ್ ಯಸ್. ಆರ್ ಮಯ್ಯ ಕಾರ್ಯಕ್ರಮ ನಿರೂಪಿಸಿದರು. ಜಯಲಕ್ಷ್ಮಿ ಆರ್ ಹೊಳ್ಳ ವಂದಿಸಿದರು.


