HEALTH TIPS

ಎಂ. ಗಂಗಾಧರ ಭಟ್ ನವ್ಯ-ನವೋದಯದ ಸಮನ್ವಯಕರು: ಬನಾರಿ

​ಬದಿಯಡ್ಕ: ಕವಿ, ಹೋರಾಟಗಾರ, ಪತ್ರಕರ್ತ ಹಾಗೂ ಅಧ್ಯಾಪಕರಾಗಿದ್ದ ಎಂ. ಗಂಗಾಧರ ಭಟ್ಟರು ನವ್ಯ ಮತ್ತು ನವೋದಯ ಸಾಹಿತ್ಯದ ಸಮನ್ವಯಕಾರರಾಗಿದ್ದರು ಎಂದು ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಡಾ. ರಮಾನಂದ ಬನಾರಿ ಹೇಳಿದರು. ಬದಿಯಡ್ಕದ ತುಳು ಭವನದಲ್ಲಿ ನಡೆದ ಗಂಗಾಧರ ಭಟ್ಟರ ಸಂಸ್ಮರಣಾ ಸಭೆಯಲ್ಲಿ ಅವರು ಮಾತನಾಡಿದರು.

​ಕೇರಳ ಸಾಹಿತ್ಯ ಸಾಂಸ್ಕೃತಿಕ ಪರಿಷತ್ ಅಧ್ಯಕ್ಷ ಮೊಹಮ್ಮದಾಲಿ ಪೆರ್ಲ ಅಧ್ಯಕ್ಷತೆ ವಹಿಸಿದ್ದರು. ಸಂಸ್ಮರಣಾ ಭಾಷಣ ಮಾಡಿದ ಬೇ.ಸಿ. ಗೋಪಾಲಕೃಷ್ಣ ಭಟ್, ಭಟ್ಟರು ಬಹುಭಾಷಾ ಪಾಂಡಿತ್ಯ ಮತ್ತು ವಿಶಾಲ ಹೃದಯ ಹೊಂದಿದ ಶ್ರೇಷ್ಠ ಸಾಹಿತಿ ಎಂದರು.

​ಕಾರ್ಯಕ್ರಮದಲ್ಲಿ ಪ್ರೊ. ಪಿ. ಎನ್. ಮೂಡಿತ್ತಾಯ, ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿ, ಎ.ಆರ್. ಸುಬ್ಬಯ್ಯಕಟ್ಟೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಚನಿಯಪ್ಪ ನಾಯ್ಕ್ ಸ್ವಾಗತಿಸಿ, ರವಿ ನಾಯ್ಕಾಪ್ ನಿರೂಪಿಸಿ, ನಾರಾಯಣ ಗೋಸಾಡ ವಂದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries