ಬದಿಯಡ್ಕ: ಕನ್ನಡ ಹೋರಾಟಗಾರ, ಕವಿ, ಪತ್ರಕರ್ತ ಹಾಗೂ ಶಿಕ್ಷಕ ದಿ. ಜಿ. ಗಂಗಾಧರ ಭಟ್ ಅವರ ಸ್ಮರಣಾ ಸಮಾರಂಭ ಅಕ್ಟೋಬರ್ 28ರಂದು ಬೆಳಿಗ್ಗೆ 9.30ಕ್ಕೆ ಬದಿಯಡ್ಕದ ತುಳು ಭವನದಲ್ಲಿ ನಡೆಯಲಿದೆ. ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಆಶ್ರಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮೊಹಮ್ಮದ್ ಆಲಿ ಪೆರ್ಲ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ವೈದ್ಯ ಸಾಹಿತಿ ರಾಮಾನಂದ ಬನಾರಿ, ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ, ಪೂವೆಂಪು ಪ್ರತಿಷ್ಠಾನದ ಅಧ್ಯಕ್ಷ ರವೀಶ್ ತಂತ್ರಿ ಕುಂಟಾರು, ಕನ್ನಡ ಸಾಹಿತ್ಯ ಪರಿಷತ್ತಿನ ಗಡಿನಾಡ ಘಟಕದ ಅಧ್ಯಕ್ಷ ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಟಿ. ಶಂಕರನಾರಾಯಣ ಭಟ್, ಆಯಿಷಾ ಪೆರ್ಲ, ಗಣೇಶ್ ಪೈ ಬದಿಯಡ್ಕ, ಚನಿಯಪ್ಪ ನಾಯ್ಕ್, ಬಿ.ಸಿ. ಗೋಪಾಲಕೃಷ್ಣ ಭಟ್, ಪ್ರಭಾವತಿ ಕೆದಿಲಾಯ, ತಾರಾನಾಥ ರೈ ಕಾಡಾರು ಬೀಡು ಹರೀಶ್, ರಾಮ ಪಟ್ಟಾಜೆ, ವಸಂತ ಬಾರಡ್ಕ, ಶ್ಯಾಮ್ ಪ್ರಸಾದ್ ಮಾನ್ಯ ಹಾಗೂ ಶ್ಯಾಮ್ ಆಳ್ವ ಮತ್ತಿತರರು ಭಾಗವಹಿಸಲಿದ್ದಾರೆ.
ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಗಾಗಿ ಶ್ರಮಿಸಿದ ದಿ. ಜಿ. ಗಂಗಾಧರ ಭಟ್ ಅವರ ಕೊಡುಗೆಯನ್ನು ಸ್ಮರಿಸುವುದು ಮತ್ತು ಅವರ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸೇವೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.



