ಕಾಸರಗೋಡು: ಕಾಸರಗೋಡು ಜಿಲ್ಲಾ ಪಂಚಾಯತ್‌ನ ಜೈವವೈವಿಧ್ಯ ನಿರ್ವಹಣಾ ಸಮಿತಿಯ ವತಿಯಿಂದ ನೀಡಲಾಗುವ ಜೈವವೈವಿಧ್ಯ ಸಂರಕ್ಷಣಾ ಪ್ರಶಸ್ತಿಗಳ ಪ್ರದಾನ ಸಮಾರಂಭ ಅಕ್ಟೋಬರ್ 24ರಂದು(ನಾಳೆ) ಬೆಳಿಗ್ಗೆ 10 ಗಂಟೆಗೆ ಕಾಞಂಗಾಡ್ ಬ್ಲಾಕ್ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.
ಮಂಜೇಶ್ವರ ಶಾಸಕ ಗೋವಿಂದನ್ ಪಳ್ಳಿಕ್ಕಾಪಿಲ್ ಕಾರ್ಯಕ್ರಮ ಉದ್ಘಾಟಿಸಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ ಅಧ್ಯಕ್ಷತೆ ವಹಿಸಲಿದ್ದಾರೆ.
‘ಬಯೋಮ್ 2026’ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮದ ಅಂಗವಾಗಿ ಪುಸ್ತಕ ಬಿಡುಗಡೆ ಹಾಗೂ ವಿಚಾರ ಸಂಕಿರಣವೂ ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ ಜೈವವೈವಿಧ್ಯ ಸಂರಕ್ಷಣಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಪ್ರಶಸ್ತಿ ನೀಡಲಾಗುತ್ತದೆ.
ಪ್ರಶಸ್ತಿ ವಿಜೇತರ ಪಟ್ಟಿ
ಅತ್ಯುತ್ತಮ ಜೈವವೈವಿಧ್ಯ ನಿರ್ವಹಣಾ ಸಮಿತಿ (ಬಿಎಂಸಿ): ನೀಲೇಶ್ವರಂ ಬ್ಲಾಕ್ ಪಂಚಾಯತ್
ಅತ್ಯುತ್ತಮ ಸಸ್ಯ ಸಂರಕ್ಷಕ ರೈತ: ಕೆ. ಕರುಣಾಕರನ್ ವಿಸ್ಮಯ, ಮುನ್ನಾಡ್
ಅತ್ಯುತ್ತಮ ಪ್ರಾಣಿ ಸಂರಕ್ಷಕ ರೈತ: ಪಿ.ಕೆ. ಲಾಲ್, ಅಂಬಲತ್ತರ
ಅತ್ಯುತ್ತಮ ಕಾವು (ಪವಿತ್ರ ವನ) ಸಂರಕ್ಷಕ: ಪಿ.ವಿ. ದಿವಾಕರನ್, ಕಡಿಂಜಿಮೂಲ
ಮ್ಯಾಂಗ್ರೂವ್ ಸಂರಕ್ಷಣೆ ಮತ್ತು ವಿಸ್ತರಣೆಯಲ್ಲಿ ಮಾದರಿ ಕಾರ್ಯ: ಒ. ರಾಜನ್, ವಲಿಯಪರಂಬ
ಹಸಿರು ವಿದ್ಯಾಲಯ: ಕೇಳಪ್ಪಜಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ, ಕೊಡಕ್ಕಾಡ್
ಹಸಿರು ಕಾಲೇಜು: ಡಾ. ಅಂಬೇಡ್ಕರ್ ಕಲಾ ಮತ್ತು ವಿಜ್ಞಾನ ಕಾಲೇಜು, ಪೆರಿಯ
ಅತ್ಯುತ್ತಮ ಬಾಲ ಸಂಶೋಧಕ: ಸಿ.ಆರ್. ಅಶ್ವಘೋಷ್, ಜಿ.ಎಚ್.ಎಸ್.ಎಸ್. ಚಾಯ್ಯೋತ್
ವಿಶೇಷ ಪ್ರಶಂಸೆ:
ಡಿ. ನೆಹಾರಿಕಾ, ಎಸ್.ಎಸ್.ಎಚ್.ಎಸ್. ಶೇಣಿ
ಪಿ.ಎಂ. ಮೊಹಮ್ಮದ್ ಜಸೀಲ್, ಸಿ.ಜೆ.ಎಚ್.ಎಸ್.ಎಸ್. ಚೆಮ್ಮನಾಡ್



