HEALTH TIPS

ಹೊಸಂಗಡಿ ರೈಲ್ವೇ ಗೇಟ್ ಮುಚ್ಚುಗಡೆ- ದುರಸ್ತಿ ಕಾಮಗಾರಿಗೆ ಚಾಲನೆ

ಮಂಜೇಶ್ವರ: ಹಲವು ಸಮಯಗಳಿಂದ ಸಮಸ್ಯೆ ಕಂಡುಬರುತ್ತಿದ್ದ ಹೊಸಂಗಡಿ ರೈಲ್ವೇ ಗೇಟ್ ದುರಸ್ತಿಗೊಳಿಸಲು ಶುಕ್ರವಾರ ಬೆಳಿಗ್ಗಿನಿಂದ ಚಾಲನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಈ ದಾರಿಯ ವಾಹನ ಸಂಚಾರನವನ್ನು ನಿಷೇಧಿಸಲಾಗಿದೆ. ಇನ್ನು ಒಂದು ವಾರದವರೆಗೆ ಈ ಮೂಲಕ ಮಂಜೇಶ್ವರ ಒಳಪೇಟೆಗೆ ವಾಹನ ಸಂಚರಿಸಲು ಮಂಜೇಶ್ವರದ ಮೂಲಕ ಇತರ ಮಾರ್ಗವನ್ನು ಬಳಸಬೇಕಾಗಿದೆ.


ಶುಕ್ರವಾರ ಬೆಳಿಗ್ಗೆ ರೈಲ್ವೇ ಗೇಟ್ ಮುಚ್ಚಿದ್ದು, ಜೆಸಿಬಿ ಮೂಲಕ ಕಾಮಗಾರಿ ಆರಂಭಿಸಲಾಗಿದೆ. ಗೇಟ್ ಬಳಿಯಲ್ಲಿ ಅತ್ಯಾಧುನಿಕ ರೀತಿಯಲ್ಲಿ ದುರಸ್ತಿ ನಡೆಸಲಾಗುವುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಈ ಹಿಂದೆ ಕಳೆದ 5 ರಿಂದ 10ರ ವರೆಗೆ ಮುಚ್ಚುಗಡೆ ನಡೆಸಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದರು. ಆದರೆ ವಿವಿಧ ಕಾರಣದಿಂದ ಕಾಮಗಾರಿ ಆರಂಭ ಮುಂದೂಡಲಾಗಿದ್ದು, ಶುಕ್ರವಾರದಿಂದ ಆರಂಭಗೊಂಡಿದೆ.

ಮಂಜೇಶ್ವರ ಒಳಪೇಟೆಯಲ್ಲಿ ಹಲವಾರು ಸರ್ಕಾರಿ ಕಚೇರಿ, ಶಾಲೆ, ಆರಾಧನಾಲಯಗಳಿದ್ದು, ಇಲ್ಲಿಗೆ ಸಂಚರಿಸಬೇಕಿದ್ದರೆ ಇನ್ನು ಒಂದಷ್ಟು ದಿನ ತ್ರಾಸಪಡಬೇಕಾಗಿದೆ. ಇನ್ನು ನವರಾತ್ರಿ ಸಹಿತ ವಿವಿಧ ಹಬ್ಬಗಳು ಆರಂಭಗೊಳ್ಳುವ ವೇಳೆ ಗೇಟ್ ಮುಚ್ಚಿರುವುದು ಜನರಿಗೆ ಸಮಸ್ಯೆ ತಂದೊಡ್ಡಲಿದೆ. ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ಕೆಲಸ ಮುಗಿಸಿ ಗೇಟ್ ತೆರೆದು ಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries