ಕಾಸರಗೋಡು: ಕಾಸರಗೋಡು ನಗರದ ಕೋಟೆಕಣಿ ನಿವಾಸಿ ಯುವಕನೊಬ್ಬ ಮಂಗಳೂರಿನ ವಾಸಸ್ಥಳದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಕೋಟೆಕಣಿಯ ಬಾಲಕೃಷ್ಣ ಅವರ ಪುತ್ರ ಸೋನಾಲ್ (24) ಮೃತ ಯುವಕ. ಎಂಬಿಎ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಮಂಗಳೂರಿನಲ್ಲಿ ನೆಲೆಸಿದ್ದ ಸೋನಾಲ್, ಸ್ನೇಹಿತರೊಂದಿಗೆ ಸೇರಿ ಬೆಡ್ಶೀಟ್ ವ್ಯಾಪಾರ ಸಂಸ್ಥೆಯನ್ನು ನಡೆಸುತ್ತಿದ್ದರು.
ಶನಿವಾರ ಸಂಜೆ ಸ್ನೇಹಿತರು ಹೊರಗೆ ತೆರಳಿದ್ದ ಸಂದರ್ಭದಲ್ಲಿ ವಾಸಸ್ಥಳದ ಕೊಠಡಿಯಲ್ಲಿ ಸೋನಾಲ್ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಮಂಗಳೂರಿನ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಕೋಟೆಕಣಿಯ ಮನೆಗೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಮೃತರು ತಂದೆ ಬಾಲಕೃಷ್ಣ, ತಾಯಿ ಶಶಿಕಲಾ ಹಾಗೂ ಸಹೋದರಿಯರಾದ ಶಾಲಿನಿ ಮತ್ತು ಸ್ನೇಹ ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.


