ಕಾಸರಗೋಡು: ಕಾಸರಗೋಡು ಸಮೀಪದ ಬೇಕಲದಲ್ಲಿ ಕಿಡಿಗೇಡಿಗಳು ಸಂಚರಿಸುತ್ತಿದ್ದ ರೈಲಿಗೆ ಕಲ್ಲು ತೂರಿದ ಪರಿಣಾಮ ರೈಲಿನ ಎಸಿ ಬೋಗಿಯ ಗಾಜು ಪುಡಿಯಾಗಿದೆ.
ಭಾನುವಾರ ರಾತ್ರಿ ಕಲ್ಲಿಕೋಟೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲಿಗೆ ಕಲ್ಲು ತೂರಾಟ ನಡೆದಿದೆ. ಘಟನೆಯಿಂದ ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಕಲ್ಲು ತೂರಾಟದ ಘಟನೆಗೆ ಸಂಬಂಧಿಸಿದಂತೆ ಬೇಕಲ ಪೊಲೀಸರು ಹಾಗೂ ರೈಲ್ವೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮಂಜೇಶ್ವರದಿಂದ ಕಣ್ಣೂರು ವರೆಗಿನ ರೈಲು ಹಳಿಗಳಲ್ಲಿ ನಿರಂತರವಾಗಿ ರೈಲುಗಳ ಮೇಲೆ ಕಲ್ಲು ತೂರಾಟ ನಡೆಯುತ್ತಿರುವುದು ಪ್ರಯಾಣಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಘಟನೆಗಳಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಪತ್ತೆಹಚ್ಚಲು ಸಾಧ್ಯವಾಗದಿರುವುದು ಕೂಡ ಆತಂಕ ಹೆಚ್ಚಿಸಿದೆ.

