ಉಪ್ಪಳ: ಮಂಗಲ್ಪಾಡಿ ಪ್ರತಾಪನಗರದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಕುಂಬಳೆ ಠಾಣೆ ಪೊಲೀಸರು ಆರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸ್ಥಳದಿಂದ 14 ಕೋಳಿಗಳು ಹಾಗೂ ₹3,110 ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಳ ಪ್ರತಾಪನಗರದ ದಿನೇಶ್ (26), ಮಂಗಲ್ಪಾಡಿ ಶಾಂತಿಗಿರಿಯ ಪುಳಿಕುಟ್ಟಿ ಹೌಸ್‌ನ ಮೋಹನನ್ (42), ಮಂಗಲ್ಪಾಡಿ ಶಾಂತಿಗಿರಿ ನಿವಾಸಿಗಳಾದ ಉದಯ (42), ಕಾಶಿಕ್ ಕೆ. (32), ಮಂಗಲ್ಪಾಡಿ ಪ್ರತಾಪನಗರದ ಗಣೇಶ್ ಕೆ.ಎನ್. (55) ಹಾಗೂ ಪೈವಳಿಕೆ ಕಯ್ಯಾರಿಯ ಪದ್ಮನಾಭ (50) ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನಂತರ ಆರೋಪಿಗಳಿಗೆ ನೋಟಿಸ್ ನೀಡಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಕೋಳಿ ಅಂಕದಲ್ಲಿ 20ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದು, ಉಳಿದವರು ಸ್ಥಳದಿಂದ ಓಡಿ ಪರಾರಿಯಾಗಿದ್ದಾರೆ.
ಕುಂಬಳೆ ಪೊಲೀಸ್ ಠಾಣೆಯ ಎಸ್‌ಐ ಅನೂಪ್ ಎಸ್.ಆರ್. ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿತು.


