ಕಾಸರಗೋಡು: ಕ್ಷೀರ ಅಭಿವೃದ್ಧಿ ಇಲಾಖೆ ಜಾರಿಗೊಳಿಸುತ್ತಿರುವ ಮಿಲ್ಕ್ ಶೆಡ್ ಅಭಿವೃದ್ಧಿ ಯೋಜನೆಯಡಿ ವುಮೆನ್ ಕ್ಯಾಟಲ್ ಕೇರ್ ವರ್ಕರ್‌ಗಳನ್ನು ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ. ಕಂಪ್ಯೂಟರ್ ತರಬೇತಿ ಪಡೆದವರಿಗೆ ಆದ್ಯತೆ ನೀಡಲಾಗುವುದು. ವಯೋಮಿತಿ: 18ರಿಂದ 45 ವರ್ಷ. ಅರ್ಜಿದಾರರು ಸಂಬಂಧಪಟ್ಟ ಬ್ಲಾಕ್‌ಗಳ ಶಾಶ್ವತ ನಿವಾಸಿಗಳಾಗಿರುವ ಮಹಿಳೆಯರಾಗಿರಬೇಕು. ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಅಕ್ಟೋಬರ್ 13ರಂದು ಸಂಜೆ 4 ಗಂಟೆಯೊಳಗೆ ಸಂಬಂಧಪಟ್ಟ ಕ್ಷೀರ ಅಭಿವೃದ್ಧಿ ಘಟಕಗಳಿಗೆ ಸಲ್ಲಿಸಬೇಕು. ದೂರವಾಣಿ ಸಂಖ್ಯೆ: 04994 255475.

