ನವದೆಹಲಿ(PTI): ರಷ್ಯಾಕ್ಕೆ ತೆರಳಿ, ಅಲ್ಲಿನ ಸಶಸ್ತ್ರ ಪಡೆಗಳಲ್ಲಿ ನೇಮಕಗೊಳ್ಳುವುದಕ್ಕೆ ಪ್ರಯತ್ನಿಸುತ್ತಿರುವ ಭಾರತೀಯರಿಗೆ ವಿದೇಶಾಂಗ ಸಚಿವಾಲಯ ಬುಧವಾರ ಎಚ್ಚರಿಕೆ ನೀಡಿದೆ.
''ಇದು ಅತ್ಯಂತ ಅಪಾಯಕಾರಿ ನಡೆ. ಇದನ್ನು ಕೇಂದ್ರ ಸರ್ಕಾರ ಉತ್ತೇಜಿಸುವುದಿಲ್ಲ. ಈ ವಿಚಾರದ ಗಂಭೀರತೆ ಹಾಗೂ ಇಂತಹ ನಡೆಗಳಿಂದ ಜೀವಕ್ಕೆ ಎದುರಾಗುವ ಅಪಾಯದ ಬಗ್ಗೆ ಅರಿಯಬೇಕು' ಎಂದು ಸಚಿವಾಲಯ ಸಲಹೆ ನೀಡಿದೆ.
'ರಷ್ಯಾಕ್ಕೆ ತೆರಳುವ ಜನರು ಸ್ವಯಂ ಪ್ರೇರಣೆಯಿಂದ ಅಲ್ಲಿನ ಸಶಸ್ತ್ರ ಪಡೆಗಳಿಗೆ ಸೇರುತ್ತಾರೆ. ಹಣಕಾಸು ಪ್ರಯೋಜನ ಪಡೆದು ನಂತರ ಭಾರತ ಸರ್ಕಾರದ ನೆರವಿನಿಂದ ಬಿಡುಗಡೆ ಹೊಂದುವ ಲೆಕ್ಕಾಚಾರದಿಂದ ಹೀಗೆ ಮಾಡುತ್ತಿರುವ ಘಟನೆಗಳು ಬಗ್ಗೆ ತಿಳಿದುಬಂದಿದೆ' ಎಂದು ಹೇಳಿದೆ.

