HEALTH TIPS

ಮಸೀದಿಗಳಲ್ಲಿ ಏಕರೂಪದ ಪ್ರಾರ್ಥನೆ: ವಕ್ಫ್ ನಿರ್ಧಾರಕ್ಕೆ ಒಮರ್, ಮೆಹಬೂಬಾ ವಿರೋಧ

ಶ್ರೀನಗರ: ಕಾಶ್ಮೀರ ಕಣಿವೆಯ ಮಸೀದಿಗಳಲ್ಲಿ ಶುಕ್ರವಾರದ ಪ್ರಾರ್ಥನೆಯನ್ನು ಏಕರೂಪಗೊಳಿಸಲು ವಕ್ಫ್ ಮಂಡಳಿ ಮುಂದಾಗಿರುವುದು ಜಮ್ಮು-ಕಾಶ್ಮೀರದಲ್ಲಿ ಭಾರಿ ರಾಜಕೀಯ ಮತ್ತು ಧಾರ್ಮಿಕ ವಿವಾದಕ್ಕೆ ಕಾರಣವಾಗಿದೆ.


ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಪಿಡಿಪಿ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹಾಗೂ ಕಣಿವೆಯ ಮುಖ್ಯ ಧರ್ಮಗುರು ಮಿರ್ವೈಜ್ ಉಮರ್ ಫಾರೂಕ್ ಈ ನಡೆಯನ್ನು ಖಂಡಿಸಿದ್ದಾರೆ. 

ಮಸೀದಿಗಳ ಧಾರ್ಮಿಕ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡಲು ವಕ್ಫ್ ಮಂಡಳಿಗೆ ಯಾವುದೇ ಅಧಿಕಾರವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್' ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ' ಮುಸ್ಲಿಮರ ಧಾರ್ಮಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಲು ಬಿಜೆಪಿ ಮಾಡುತ್ತಿರುವ ಸ್ವೀಕಾರಾರ್ಹವಲ್ಲದ ಯತ್ನವಿದು. ಯಾವುದೇ ಕಾರಣಕ್ಕೂ ಇದನ್ನು ಸಹಿಸಲು ಸಾಧ್ಯವಿಲ್ಲ. ಬಿಜೆಪಿ ನೇಮಿತ ಅಧ್ಯಕ್ಷೆ ತಮ್ಮ ವರಿಷ್ಠರನ್ನು ಒಲಿಸಲು ಮಾಡುತ್ತಿರುವ ಈ ತಪ್ಪು ಪ್ರಯತ್ನವನ್ನು ತಕ್ಷಣವೇ ನಿಲ್ಲಿಸಬೇಕು' ಎಂದು ಆಗ್ರಹಿಸಿದ್ದಾರೆ.

ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಮಾತನಾಡಿ, 'ಇಸ್ಲಾಂ ಧರ್ಮಕ್ಕೆ ಸೇರದ ಸಚಿವರೊಬ್ಬರು ಮೌಲಾನರು ಮತ್ತು ಮುಫ್ತಿಗಳು ಮಸೀದಿಗಳಲ್ಲಿ ಏನು ಬೋಧಿಸಬೇಕು ಎಂಬುದನ್ನು ತೀರ್ಮಾನಿಸಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ. ಮುಂದುವರಿದು, ಶುಕ್ರವಾರದ ಪ್ರಾರ್ಥನೆಗಳು ಸ್ಥಳೀಯ ಮತ್ತು ಸಾಮಾಜಿಕ ಕಳಕಳಿಗಳನ್ನು ಪ್ರತಿಬಿಂಬಿಸಬೇಕು. ಇದನ್ನು ಏಕರೂಪಗೊಳಿಸಲು ಹೊರಟಿರುವುದು ಬಿಜೆಪಿ ಪ್ರಸ್ತಾವಿತ 'ಏಕರೂಪ ನಾಗರಿಕ ಸಂಹಿತೆ'ಯ (ಯುಸಿಸಿ) ಮಾದರಿಯಂತಿದೆ ಎಂದು ಟೀಕಿಸಿದ್ದಾರೆ.

ಭಾರತದ ಧಾರ್ಮಿಕ ವೈವಿಧ್ಯತೆಯನ್ನು ಉಲ್ಲೇಖಿಸಿದ ಅವರು, 'ಮುಸ್ಲಿಮರ ಸಹನೆ ಮತ್ತು ತಾಳ್ಮೆಯನ್ನು ಪರೀಕ್ಷಿಸಲು ಕಾಶ್ಮೀರವನ್ನು ಪ್ರಯೋಗಾಲಯವನ್ನಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಜೊತೆಗೆ, ವಕ್ಫ್ ಮಂಡಳಿಯ ಆಡಳಿತ ಮತ್ತು ವ್ಯವಹಾರಗಳನ್ನು ತಕ್ಷಣವೇ ಜನಪ್ರತಿನಿಧಿಗಳ ಆಯ್ಕೆಯಾದ ಸರ್ಕಾರಕ್ಕೆ ಹಸ್ತಾಂತರಿಸಬೇಕು' ಎಂದೂ ಆಗ್ರಹಿಸಿದ್ದಾರೆ.

ಧಾರ್ಮಿಕ ಒಕ್ಕೂಟ 'ಎಂಎಂಯು' ಖಂಡನೆ:

ಮಿರ್ವೈಜ್ ಉಮರ್ ಫಾರೂಕ್ ನೇತೃತ್ವದ ಸಾಮಾಜಿಕ-ಧಾರ್ಮಿಕ ಸಂಘಟನೆಗಳ ಒಕ್ಕೂಟವಾದ 'ಮುತಾಹಿದಾ ಮಜ್ಲಿಸ್-ಎ-ಉಲೇಮಾ' (ಎಂಎಂಯು) ಕೂಡ ಈ ಪ್ರಸ್ತಾಪವನ್ನು ತಿರಸ್ಕರಿಸಿದೆ. ಸರ್ಕಾರವು ಧಾರ್ಮಿಕ ಪ್ರವಚನವನ್ನು ಅಥವಾ ಮಸೀದಿಗಳಲ್ಲಿ ಏನನ್ನು ಬೋಧನೆ ಮಾಡಬೇಕು ಎಂಬುವುದನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದಿದೆ.

'ಸಾಮಾಜಿಕ ಕಳಕಳಿಯ ವಿಷಯಗಳ ಕುರಿತು ಧರ್ಮಗುರುಗಳು ಸ್ವಯಂಪ್ರೇರಿತವಾಗಿ ಚರ್ಚಿಸುವುದಕ್ಕೂ ಮತ್ತು ಧಾರ್ಮಿಕ ಅಭಿವ್ಯಕ್ತಿಯ ಮೇಲೆ ಆಡಳಿತಾತ್ಮಕ ನಿಯಂತ್ರಣ ಸಾಧಿಸುವುದಕ್ಕೂ ವ್ಯತ್ಯಾಸವಿದೆ. ಧಾರ್ಮಿಕ ಆಡಳಿತಕ್ಕಿಂತ ಹೆಚ್ಚಾಗಿ ವಕ್ಫ್ ಆಸ್ತಿಪಾಸ್ತಿಗಳ ನಿರ್ವಹಣೆ ಹಾಗೂ ರಕ್ಷಣೆಯತ್ತ ಮಂಡಳಿಯು ಗಮನಹರಿಸಬೇಕು' ಎಂದೂ ಆಗ್ರಹಿಸಿದೆ.

ವಕ್ಫ್ ಮಂಡಳಿಯ ಪ್ರಸ್ತಾಪವೇನು?

  • ವಕ್ಫ್ ಮಂಡಳಿಯ ವ್ಯಾಪ್ತಿಗೆ ಬರುವ ಮಸೀದಿಗಳಲ್ಲಿ ಪ್ರಾರ್ಥನೆಯ ವಿಷಯಗಳನ್ನು ಮುಂಚಿತವಾಗಿಯೇ ನಿಗದಿಪಡಿಸಲು ಮುಫ್ತಿಗಳು, ಇಮಾಮರು ಹಾಗೂ ಖತೀಬ್‌ಗಳನ್ನೊಳಗೊಂಡ ಸಮಿತಿಗೆ ವಹಿಸಲು ಉದ್ದೇಶಿಸಲಾಗಿದೆ.

  • ವಕ್ಫ್ ಮಂಡಳಿಗೆ ಒಳಪಡುವ ಮಸೀದಿಗಳು, ದರ್ಗಾಗಳು ಹಾಗೂ ಜಾಮಿಯಾ ಮಸೀದಿಗಳಲ್ಲಿ ನಡೆಯುವ ಶುಕ್ರವಾರದ ಪ್ರಾರ್ಥನೆಗಳು ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳಿಗೂ ಈ ನಿಯಮ ಅನ್ವಯವಾಗಲಿದೆ.

ಸುಮಾರು ಒಂದು ತಿಂಗಳ ಹಿಂದೆಯೇ ಜಂಟಿ 'ಖುತ್ಬಾ' ಅಥವಾ ಭಾಷಣ ವಿಷಯ ನೀಡುವಂತೆ ಮೌಲ್ವಿಗಳಿಗೆ ನಿರ್ದೇಶನ ನೀಡಲಾಗಿತ್ತು ಎಂದು ಮಂಡಳಿಯ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಇಷ್ಟಿಯಾಕ್ ಮೊಹಿ-ಉದ್-ದಿನ್ ತಿಳಿಸಿದ್ದಾರೆ. ಅಲ್ಲದೇ ತನ್ನ ಆಡಳಿತ ವ್ಯಾಪ್ತಿಗೆ ಬಾರದ ಮಸೀದಿಗಳಿಗೂ ಈ ವ್ಯವಸ್ಥೆಯನ್ನು ವಿಸ್ತರಿಸುವ ಕುರಿತು ಮಂಡಳಿಯು ಸಲಹೆಗಳನ್ನು ಕೋರಿದೆ ಎನ್ನಲಾಗಿದೆ.

ಆದರೆ, ಈ ಆರೋಪಗಳನ್ನು ಅಲ್ಲಗೆಳೆದಿರುವ ವಕ್ಫ್ ಮಂಡಳಿಯ ಅಧ್ಯಕ್ಷೆ ಹಾಗೂ ಬಿಜೆಪಿ ನಾಯಕಿ ದರಕ್ಷಾನ್ ಅಂದ್ರಾಬಿ, ಈ ವಿಷಯಗಳನ್ನು ಧಾರ್ಮಿಕ ವಿದ್ವಾಂಸರೇ ನಿರ್ಧರಿಸುತ್ತಾರೆಯೇ ಹೊರತು ಅಧಿಕಾರಿಗಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


This is an unacceptable attempt by the BJP to interfere in the religious affairs of Muslims and will not be accepted under any circumstances. The BJP appointed Chairperson must immediately halt this misplaced attempt to please her masters.
The Hindu
@the_hindu
The J&K Waqf Board has pushed for uniform Friday sermons at all mosques in the Union Territory (UT) and will become the first region in the country to adopt this mechanism to ensure the topics to be highlighted at religious places are pre-decided and approved by a committee of
1.6K
Reply
Copy link






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries