HEALTH TIPS

ಮುಳಿಂಜ ಶಾಲೆಯಲ್ಲಿ ಕರಕುಶಲ ಕಾರ್ಯಾಗಾರ-ಗಣ್ಯರಿಗೆ ಗೌರವಾರ್ಪಣೆ

ಉಪ್ಪಳ: ಪಾರಂಪರಿಕ ಕಲೆಗಳನ್ನು ಉಳಿಸಿ ಬೆಳೆಸಿ, ಸೃಜನಶೀಲತೆ ವೃದ್ಧಿಸಿ ಸ್ವಾವಲಂಬಿ ಜೀವನಕ್ಕೆ ತರಬೇತಿ ನೀಡುವ ಕರಕುಶಲ ಕಾರ್ಯಗಾರ, ಸ್ಥಳೀಯ ಕಚ್ಚಾ ವಸ್ತುಗಳ ಬಳಸಿಯೇ ನಡೆಸುವ ಉದ್ದೇಶದಿಂದ ಮುಳಿಂಜ ಸರ್ಕಾರಿ ಶಾಲೆಯಲ್ಲಿ ಆಯೋಜಿಸಲಾಯಿತು. 


ಈ ಕಾರ್ಯಕ್ರಮವನ್ನು ಮಂಗಲ್ಪಾಡಿ ಪಂಚಾಯತಿ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹಮಾನ್ ಉದ್ಘಾಟಿಸಿ ಕರಕುಶಲ ಕಾರ್ಯಾಗಾರದಿಂದ ವಿದ್ಯಾರ್ಥಿಗಳಲ್ಲಿ ಕೈಚಳಕ, ತಾಳ್ಮೆ, ಕಲಾಪ್ರೇಮ ಹೆಚ್ಚುತ್ತದೆ ಮತ್ತು ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ ಎಂದರು. ಸಂಪನ್ಮೂಲ ವ್ಯಕ್ತಿಯಾದ ಪದ್ಮಸರೋಜ ಅವರು ವಿದ್ಯಾರ್ಥಿಗಳಿಗೆ ಕಾರ್ಯಗಾರ ತರಗತಿಯನ್ನು ನಡೆಸಿಕೊಟ್ಟರು. ವಿವಿಧ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ನೀಡಿದ ಅವರು, ಮಕ್ಕಳಲ್ಲಿ ಸೃಜನಶೀಲತೆ ಹಾಗೂ ಕೌಶಲ್ಯಗಳನ್ನು ಬೆಳೆಸುವಲ್ಲಿ ಮಾರ್ಗದರ್ಶನ ನೀಡಿದರು.

ಇದೇ ಸಂದರ್ಭದಲ್ಲಿ ನಿಕಟಪೂರ್ವ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಜಾರ್ಜ್ ಕ್ರಾಸ್ತಾ 'ಮುಳಿಂಜವಾಣಿ' ಪತ್ರಿಕೆಯ ಮೂರನೇ ಸಂಚನ್ನು ಬಿಡುಗಡೆಗೊಳಿಸಿ ಇದು ಶಾಲೆ ಕೈಗನ್ನಡಿಯಾಗಿ, ವಿದ್ಯಾರ್ಥಿಗಳ ಅನುಭವಗಳ ಪತ್ರಿಕೆಯಾಗಿದೆ ಎಂದರು. ಕನಿಷ್ಠ ಕಲಾವಧಿಯಲ್ಲಿ ಗರಿಷ್ಠ ಕಾರ್ಯಕ್ರಮವನ್ನು ವಿಭಿನ್ನ ರೀತಿಯಲ್ಲಿ ಆಯೋಜಿಸಿ ಜನಮನ ಗೆದ್ದ ಮಂಜೇಶ್ವರ ಬಿಪಿಸಿ ರಾಜಗೋಪಾಲನ್ ಒಬ್ಬ ಮಾದರಿ ಬಿಪಿಸಿಯಾಗಿ ಗುರುತಿಸಿಕೊಂಡಿದ್ದಾರೆ. ವಿಶೇಷ ಚೇತನ ಮಕ್ಕಳಿಗಾಗಿ ವೈದ್ಯಕೀಯ ಶಿಬಿರ, ಬಯಲು ಪ್ರವಾಸ, ಕರಕುಶಲ ಕಾರ್ಯಾಗಾರ, ಕ್ರೀಡಾ ಕೂಟ ಡೈಪರ್ ವಿತರಣೆ ಮೊದಲಾದ ಹಲವಾರು ಕಾರ್ಯಕ್ರಮ ನಡೆಸಲು ತಾವೇ ಸ್ವತಃ ಪ್ರಯೋಜಕರನ್ನು ಕಂಡುಕೊಂಡು ಮಕ್ಕಳಿಗಾಗಿ ಪ್ರಮಾಣಿಕವಾಗಿ ದುಡಿದ ಮಂಜೇಶ್ವರ ಬಿ. ಆರ್. ಸಿ.ಯ ಬ್ಲಾಕ್ ಸಂಯೋಜಕ ರಾಜಗೋಪಾಲನ್. ಪಿ. ಹಾಗೂ ನಿಕಟ ಪೂರ್ವ ಉಪಜಿಲ್ಲಾ ವಿದ್ಯಾಧಿಕಾರಿ ಜಾರ್ಜ್ ಕ್ರಸ್ತಾ ಅವರನ್ನು ಶಾಲಾ ಮುಖ್ಯ ಶಿಕ್ಷಕಿ ಚಿತ್ರಾವತಿ  ಚಿಗುರುಪಾದೆ ಮತ್ತು ಪಂಚಾಯತಿ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರೆಹಮಾನ್, ಶಾಲಾ ಶಿಕ್ಷಕವೃಂದ ಹಾಗೂ ಬಿ ಆರ್ ಸಿ ನೌಕರರ ಸಮಕ್ಷಮದಲ್ಲಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬಿ.ಆರ್.ಸಿ.ಯತರಬೇತುದಾರ ನಾರಾಯಣರಾಜ್, ಶಿಕ್ಷಕಿ ಐಶ್ವರ್ಯ ರೇಷ್ಮಾ, ಧನ್ಯ, ಜಸೀಲಾ ಶುಭ ಹಾರೈಸಿದರು. ಶಿಕ್ಷಕ ಅಬ್ದುಲ್ ಬಶೀರ್ ಸ್ವಾಗತಿಸಿ, ಶಿಕ್ಷಕಿ ಐಷತ್ ಸೈನಾಝ್ ವಂದಿಸಿದರು. ಶಿಕ್ಷಕ ರಿಯಾಸ್ ಪೆರಿಂಗಡಿ ಕಾರ್ಯಕ್ರಮ ನಿರೂಪಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries