ಕಾಸರಗೋಡು: ವಿವಾಹಿತ ಮಹಿಳೆಯ ಬೆದರಿಸಿ, ನಗ್ನವಾಗಿ ವಿಡಿಯೋದೊಂದಿಗೆ ಕರೆ ಮಾಡುವಂತೆ ಒತ್ತಾಯಿಸಿ, ನಂತರ ಈ ಚಿತ್ರಗಳನ್ನು ಸೆರೆಹಿಡಿದು ಬ್ಲ್ಯಾಕ್‍ಮೇಲ್ ಮಾಡಿದ ಆರೋಪದನ್ವಯ ದೈವ ನರ್ತನ ಕಲಾವಿದ ತಿಮಿರಿ ನಿವಾಸಿ ರಿಜೇಶ್(39)ಎಂಬಾತನನ್ನು ಪರಿಯಾರಂ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಕಡನ್ನಪಳ್ಳಿ-ಪಾಣಪುಳ ಪಂಚಾಯಿತಿ ವ್ಯಾಪ್ತಿಯ ಮಹಿಳೆಯೊಬ್ಬರು ನೀಡಿದ ದೂರಿನನ್ವಯ ಈ ಬಂಧನ.
2025ರ ಅಕ್ಟೋಬರ್ 6ರಿಂದ 2026ರ ಜುಲೈ 6ರ ನಡುವಿನ ಅವಧಿಯಲ್ಲಿ ಘಟನೆ ನಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಆರೋಪಿಯು ಮಹಿಳೆಗೆ ದೂರವಾಣಿ ಕರೆ ಮಾಡಿ ನಗ್ನವಾಗಿ ವಾಟ್ಸ್ಯಾಪ್ ವಿಡಿಯೋ ಕರೆ ಮಾಡುವಂತೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಮಹಿಳೆ ವಿಡಿಯೋ ಕರೆ ಮಾಡಿದ ವೇಳೆ ಆಕೆಯ ಚಿತ್ರಗಳನ್ನು ಸ್ಕ್ರೀನ್‍ಶಾಟ್ ತೆಗೆದುಕೊಂಡು, ಅವುಗಳನ್ನು ಬಹಿರಂಗಪಡಿಸುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಮತ್ತೆ ವಿಡಿಯೋ ಕರೆ ಮಾಡುವಂತೆ ಒತ್ತಾಯಿಸಿದ್ದು, ಮಹಿಳೆ ನಿರಾಕರಿಸಿದರೂ ಬಿಡದೆ, ನಿರಂತರವಾಗಿ ಬೆದರಿಕೆ ಹಾಕಿರುವುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣದ ತನಿಖೆಯನ್ವಯ ಪೋಲೀಸರು ಆರೋಪಿಯ ಮೊಬೈಲ್ ಪೋನನ್ನು ವಶಕ್ಕೆ ಪಡೆದು ವೈಜ್ಞಾನಿಕ ಪರೀಕ್ಷೆಗೆ ಕಳುಹಿಸಿದ್ದಾರೆ.


