HEALTH TIPS

ಇರಾನ್ ಮೇಲೆ ʼಎಂಒಎಬಿ' ಬಾಂಬ್ ಪ್ರಯೋಗಿಸಲು ಅಮೆರಿಕ ಚಿಂತನೆ: ವರದಿ

ವಾಶಿಂಗ್ಟನ್: ಪ್ರಸ್ತುತ ಸಂಘರ್ಷದಲ್ಲಿ ಸ್ಥಗಿತಗೊಂಡಿರುವ ಯುದ್ಧವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮತ್ತೆ ಮುಂದುವರಿಸಲು ನಿರ್ಧರಿಸಿದರೆ, ಇರಾನ್ ವಿರುದ್ಧ ತನ್ನ ಅತ್ಯಂತ ದೊಡ್ಡ ಅಣ್ವಸ್ತ್ರವಲ್ಲದ ಬಾಂಬ್ ಅನ್ನು ಬಳಸಲು ಅಮೆರಿಕ ಪರಿಶೀಲಿಸುತ್ತಿದೆ ಎಂದು ಸಿಎನ್‍ಎನ್ ಗುರುವಾರ ವರದಿ ಮಾಡಿದೆ. 


ವರದಿಯ ಪ್ರಕಾರ, ಇರಾನ್‍ನ ಇಂಧನ ಮೂಲಸೌಕರ್ಯ ಮತ್ತು ಪರಮಾಣು ತಾಣಗಳನ್ನು ಗುರಿಯಾಗಿಸಿಕೊಂಡು ಜಿಬಿಯು-4343/ಬಿ ಮ್ಯಾಸಿವ್ ಆಡ್ರ್ನೆನ್ಸ್ ಏರ್ ಬ್ಲಾಸ್ಟ್ (ಎಂಒಎಬಿ) ಬಾಂಬ್ (ಮದರ್ ಆಫ್ ಆಲ್ ಬಾಂಬ್ಸ್ ಎಂದು ಕರೆಯಲ್ಪಡುವ) ಬಾಂಬ್ ಅನ್ನು ಬಳಸಲು ಮಿಲಿಟರಿ ಯೋಜಿಸುತ್ತಿದೆ.

ಆದರೆ, ಒಂದು ವೇಳೆ ಈ ಬಾಂಬ್ ಅನ್ನು ಬಳಸಿದರೆ ಅದರ ಪರಿಣಾಮಕಾರಿತ್ವದ ಬಗ್ಗೆ, ವಿಶೇಷವಾಗಿ ಇರಾನ್ ಭೂಗತ ಪರಮಾಣು ತಾಣಗಳನ್ನು ನಾಶಪಡಿಸುವ ಸಾಮಥ್ರ್ಯದ ಬಗ್ಗೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಎಂಒಎಬಿ ಎಂಬುದು ಬೃಹತ್ ಪ್ರದೇಶವನ್ನು ತೆರವುಗೊಳಿಸಲು ಸೂಕ್ತವಾದ ಅತ್ಯಂತ ಪ್ರಭಾವಶಾಲಿ ಅಸ್ತ್ರವಾಗಿದೆ, ಆದರೆ ಇದು ಖಂಡಿತವಾಗಿಯೂ ಭೂಮಿಯ ಆಳಕ್ಕೆ ತೂರಿಕೊಂಡು ಹೋಗುವ ಯುದ್ಧಸಾಧನವಾಗಿ ವಿನ್ಯಾಸಗೊಳಿಸಲ್ಪಟ್ಟಿಲ್ಲ. ಇಷ್ಟೊಂದು ಬೃಹತ್ ಪ್ರಮಾಣದ ಆಯುಧದ ಬಳಕೆಯಿಂದ ನಾಗರಿಕರಿಗೆ ಉಂಟಾಗಬಹುದಾದ ಪ್ರಾಣಹಾನಿಯ ಬಗ್ಗೆಯೂ ಆತಂಕಗಳು ವ್ಯಕ್ತವಾಗಿವೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries