ಕಾಸರಗೋಡು: ಅಕ್ಟೋಬರ್ 1 ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತದಾನ ದಿನ ಆಚರಣೆ- ಕಾಸರಗೋಡು ಜಿಲ್ಲಾ ಮಟ್ಟದ ಕಾರ್ಯಕ್ರಮಗಳನ್ನು ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ ಅವರು ಕಾಞಂಗಾಡು ರಾಷ್ಟ್ರೀಯ ಆರೋಗ್ಯ ಮಿಷನ್ ಸಭಾಂಗಣದಲ್ಲಿ ಉದ್ಘಾಟಿಸಿದರು.
ಜಿಲ್ಲಾ ವೈದ್ಯಕೀಯ ಕಚೇರಿ (ಆರೋಗ್ಯ), ರಾಷ್ಟ್ರೀಯ ಆರೋಗ್ಯ ಮಿಷನ್ ಮತ್ತು ಕಾಞಂಗಾಡು ಜಿಲ್ಲಾ ಆಸ್ಪತ್ರೆ ರಕ್ತ ಕೇಂದ್ರ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಞಂಗಾಡು ನಗರಸಭೆ ಅಧ್ಯಕ್ಷ ವಿ.ವಿ. ರಮೇಶನ್ ವಹಿಸಿದ್ದರು. ಕಾಞಂಗಾಡು ಜಿಲ್ಲಾ ಆಸ್ಪತ್ರೆಯ ಅಧೀಕ್ಷಕ ಡಾ. ಎಂ.ಪಿ. ಜೀಜಾ ಮುಖ್ಯ ಭಾಷಣ ಮಾಡಿದರು. ರಾಷ್ಟ್ರೀಯ ಆರೋಗ್ಯ ಮಿಷನ್ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕಿ ಡಾ. ಧನ್ಯಾ ದಯಾನಂದ್ ಅವರು ದಿನದ ಆಚರಣೆಯ ಸಂದೇಶ ನೀಡಿದರು. ಎಚ್‍ಡಬ್ಲ್ಯೂಸಿ ನೋಡಲ್ ಅಧಿಕಾರಿ ಡಾ. ಅಂಜು ಎ.ಎಸ್, ಜಿಲ್ಲಾ ವಿಬಿಡಿಸಿ ಅಧಿಕಾರಿ ಗಿರೀಶ್ ಕುಮಾರ್ ಕೆ.ವಿ, ಮತ್ತು ಉಪ ಜಿಲ್ಲಾ ಶಿಕ್ಷಣ ಮಾಧ್ಯಮ ಅಧಿಕಾರಿ ಪಿ.ಪಿ. ಹಸೀಬ್ ಮಾತನಾಡಿದರು. ಜಿಲ್ಲಾ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಅಬ್ದುಲ್ ಲತೀಫ್ ಮಠಥಿಲ್ ಸ್ವಾಗತಿಸಿದರು ಮತ್ತು ಕಾಞಂಗಾಡು ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ತಂತ್ರಜ್ಞ ಫಸ್ಲಾ ಧನ್ಯವಾದ ಅರ್ಪಿಸಿದರು. ನಂತರ ನಡೆದ ಜಾಗೃತಿ ವಿಚಾರ ಸಂಕಿರಣದಲ್ಲಿ, ಜಿಲ್ಲಾ ಆಸ್ಪತ್ರೆ ರಕ್ತ ಕೇಂದ್ರದ ವೈದ್ಯಾಧಿಕಾರಿ ಡಾ. ಅಂಕಿತಾ ಶಿಬು ರಾಬರ್ಟ್ ತರಗತಿ ನಡೆಸಿಕೊಟ್ಟರು.
2025-2026ನೇ ಸಾಲಿನಲ್ಲಿ ಕಾಞಂಗಾಡ್ ಜಿಲ್ಲಾ ಆಸ್ಪತ್ರೆ ರಕ್ತ ಕೇಂದ್ರದ ವ್ಯಾಪ್ತಿಯಲ್ಲಿ ಹೆಚ್ಚು ರಕ್ತದಾನ ಮಾಡಿದ ಸ್ವಯಂಸೇವಾ ಸಂಸ್ಥೆಗಳು ಮತ್ತು ಓSS ಘಟಕಗಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ, ಸ್ವಯಂಸೇವಾ ರಕ್ತದಾನ ಶಿಬಿರಗಳ ಮೂಲಕ ಗರಿಷ್ಠ ಸಂಖ್ಯೆಯ ದಾನಿಗಳನ್ನು ಒದಗಿಸಿದ್ದಕ್ಕಾಗಿ ಆಙಈI ಕಾಸರಗೋಡು ಜಿಲ್ಲಾ ಸಮಿತಿ (500), ರಕ್ತದಾನಿಗಳು ಕೇರಳ (395), ಇಏಓಒ ಸರ್ಕಾರಿ. IಖಿI ಕಯ್ಯೂರು (117), ತ್ರಿಕರಿಪುರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಓSS ಘಟಕ (70), ಸೇವಾ ಭಾರತಿ (70), ಉಊSS ಕುಟ್ಟಮತ್ ಎನ್.ಎಸ್.ಎಸ್ ಘಟಕ (67) ಮತ್ತು ಯುವ ಕಾಂಗ್ರೆಸ್ (61) ಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ರಕ್ತದಾನದ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸಲು ಮತ್ತು ಸ್ವಯಂಸೇವಾ ರಕ್ತದಾನವನ್ನು ಪೆÇ್ರೀತ್ಸಾಹಿಸಲು ಅಕ್ಟೋಬರ್ 1 ಅನ್ನು ರಾಷ್ಟ್ರೀಯ ಸ್ವಯಂಸೇವಾ ರಕ್ತದಾನ ದಿನವೆಂದು ಆಚರಿಸಲಾಗುತ್ತದೆ. ಭಾರತದಲ್ಲಿ 1975 ರಲ್ಲಿ ಈ ದಿನವನ್ನು ಪ್ರಾರಂಭಿಸಲಾಯಿತು. ಸ್ವಯಂಪ್ರೇರಿತ ರಕ್ತದಾನ ಎಂದರೆ ಯಾವುದೇ ಆರ್ಥಿಕ ಅಥವಾ ಇತರ ಲಾಭದ ಉದ್ದೇಶವಿಲ್ಲದೆ ಒಬ್ಬ ವ್ಯಕ್ತಿಯು ತನ್ನ ಸ್ವಂತ ರಕ್ತದಾನ ಮಾಡುವುದು. ಸ್ವಯಂಪ್ರೇರಿತ ರಕ್ತದಾನ ಮಾಡುವ ಮೂಲಕ, ಒಬ್ಬ ವ್ಯಕ್ತಿಯು ಇತರರ ಜೀವಗಳನ್ನು ಉಳಿಸುವುದರ ಜೊತೆಗೆ ತನ್ನ ಸ್ವಂತ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು. 18 ರಿಂದ 65 ವರ್ಷ ವಯಸ್ಸಿನ ಯಾವುದೇ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಬಹುದು. ದೇಹದ ತೂಕ 45-50 ಕೆಜಿಗಿಂತ ಕಡಿಮೆಯಿರಬಾರದು ಮತ್ತು ದೇಹದ ಉಷ್ಣತೆಯು ಸಾಮಾನ್ಯವಾಗಿರಬೇಕು. ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟವು 12.5 ಗ್ರಾಂ/ಡಿಎಲ್-ಗಿಂತ ಕಡಿಮೆಯಿರಬಾರದು. ಪುರುಷರು ಮೂರು ತಿಂಗಳಿಗೊಮ್ಮೆ ಮತ್ತು ಮಹಿಳೆಯರು ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.



