HEALTH TIPS

ಪ್ರತಿಭಟನೆ ವೇಳೆ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಪೊಲೀಸ್‌ಗೆ ಬಡ್ತಿ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ವಿರುದ್ಧ ನಡೆದ ಪ್ರತಿಭಟನೆ ವೇಳೆ ಪತ್ರಕರ್ತೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಅಸಿಸ್ಟೆಂಟ್ ಕಮಿಷನರ್‌ ಸೇರಿದಂತೆ ಇತರ 11 ಅಧಿಕಾರಿಗಳಿಗೆ ಸೋಮವಾರ(ಅ.5) ಅಡಿಷನಲ್ ಡೆಪ್ಯುಟಿ ಕಮಿಷನರ್ ಹುದ್ದೆಗೆ ಬಡ್ತಿ ನೀಡಲಾಗಿದೆ. 


ಇವು ನಿಯಮಿತ ಬಡ್ತಿಗಳಾಗಿದ್ದು, ಬಡ್ತಿಗಾಗಿ ವಿನಂತಿಯನ್ನು ಬಹಳ ಹಿಂದೆಯೇ ಕಳುಹಿಸಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಕಾಸ್ ಶಿಯೋಖಂಡ್, ಎ. ವೆಂಕಟೇಶ್, ಗುರ್‌ಸೇವಕ್ ಸಿಂಗ್, ರೇಣು ಲತಾ, ವಿದುಷಿ ಕೌಶಿಕ್, ಮನು ಹಿಮಾಂಶು, ಸಕಾರಿಯಾ ಮಿಹಿರ್ ಪ್ರವೀಣ್‌ಭಾಯಿ, ಗರಿಮಾ ತಿವಾರಿ, ವಿವೇಕ್ ಭಗತ್, ಆಶಿಶ್ ಕುಮಾರ್, ಮನೀಶ್ ಲಾಡ್ಲಾ ಮತ್ತು ರೋಹಿತ್ ಗುಪ್ತಾ ಅವರಿಗೂ ಬಡ್ತಿ ನೀಡಲಾಗಿದೆ.

ಶನಿವಾರ (ಅ. 3) ಜಂತರ್ ಮಂತರ್‌ನಲ್ಲಿ ಚುನಾವಣಾ ಆಯೋಗದ ವಿರುದ್ಧ ನಡೆದ ಪ್ರತಿಭಟನೆ ವೇಳೆ ಮೂವರು ಪತ್ರಕರ್ತೆಯರು, ದೆಹಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ದೆಹಲಿ ಪೊಲೀಸರು, 'ಮೂವರು ಪತ್ರಕರ್ತೆಯರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಅವರ ದೂರುಗಳನ್ನು ಸ್ವೀಕರಿಸಿದ್ದು, ನ್ಯಾಯಸಮ್ಮತ ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ಅವುಗಳನ್ನು ಕ್ರೈಂ ಬ್ರಾಂಚ್‌ಗೆ ವರ್ಗಾಯಿಸಲಾಗಿದೆ' ಎಂದು ಹೇಳಿದ್ದರು.

ಈ ಆರೋಪಗಳ ನಂತರ ಹಲವು ಸ್ವತಂತ್ರ ಪತ್ರಕರ್ತರು, ಆರೋಪಿತ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದ್ದರು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries