HEALTH TIPS

ಭಾರತ-ಚೀನಾ ಸೇನೆ ಮುಖಾಮುಖಿ: ವಿವರಣೆ ನೀಡಲು ಮೋದಿಗೆ ಕಾಂಗ್ರೆಸ್ ಆಗ್ರಹ

ನವದೆಹಲಿ:  ಅರುಣಾಚಲ ಪ್ರದೇಶ ಗಡಿಯಲ್ಲಿ ಚೀನಾ ಸೇನೆ ಜೊತೆ ಭಾರತೀಯ ಸೇನೆ ಮುಖಾಮುಖಿ ಕುರಿತಂತೆ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿಯನ್ನು ತರಾಟೆಗೆ ತೆಗೆದುಕೊಂಡಿದೆ. 


ಗಡಿ ಪರಿಸ್ಥಿತಿ ಕುರಿತಂತೆ ವಿವರವಾದ ಹೇಳಿಕೆ ನೀಡುವ ಮೂಲಕ ದೇಶ ಮತ್ತು ಸಂಸತ್ತನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದೆ.

ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಭೇಟಿ ಸಂದರ್ಭ ಗಡಿ ವಿವಾದ ಕುರಿತಂತೆ ಪ್ರಸ್ತಾಪಿಸದ ಮೋದಿ ನಡೆ ಹೇಡಿತನದ್ದು ಎಂದಿರುವ ಕಾಂಗ್ರೆಸ್, ಭಾರತದ ಹಿತಾಸಕ್ತಿಯ ಶರಣಾಗತಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.

ಚೀನಾದೊಂದಿಗಿನ ಗಡಿ ಸಂಘರ್ಷ ಮುಂದುವರಿದಿವೆ ಎಂದು ಐಟಿಬಿಪಿ ಮಹಾನಿರ್ದೇಶಕ ಶತ್ರುಜೀತ್ ಕಪೂರ್ ಒಪ್ಪಿಕೊಳ್ಳುವ ಮೂಲಕ ಸತ್ಯಾಂಶ ಬಹಿರಂಗಗೊಂಡಿದೆ ಎಂದು ಕಾಂಗ್ರೆಸ್ ಹೇಳಿದೆ. ಕಳೆದ ಕೆಲವು ದಿನಗಳಲ್ಲಿ ಅರುಣಾಚಲ ಪ್ರದೇಶದ ಹಲವು ಸ್ಥಳಗಳಲ್ಲಿ ಉಭಯ ದೇಶಗಳ ಸೇನೆಯ ಮುಖಾಮುಖಿಯಾಗಿದೆ. ಅದು ಈಗಲೂ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.

2020ರಲ್ಲಿ ಪೂರ್ವ ಲಡಾಖ್‌ನಲ್ಲಿ ಗಂಭೀರ ಸೇನಾ ಸಂಘರ್ಷ ನಡೆದರೂ, ನಂತರ ಪ್ರಧಾನಿ ಮೋದಿ ಚೀನಾಗೆ ಕ್ಲೀನ್ ಚಿಟ್ ನೀಡಿದ್ದರು. ಆ ಬಳಿಕ, ಅರುಣಾಚಲ ಪ್ರದೇಶದಲ್ಲಿ ಚೀನಾ ಮತ್ತಷ್ಟು ಧೈರ್ಯಶಾಲಿಯಾಗಿದೆ ಎಂದು ಕಾಂಗ್ರೆಸ್ ಹೇಳಿದೆ.

ಕಾಂಗ್ರೆಸ್ ಹೇಳಿಕೆ ಮತ್ತು ಆರೋಪಗಳಿಗೆ ಸಂಬಂಧಿಸಿದಂತೆ ಸರ್ಕಾರ ಅಥವಾ ಬಿಜೆಪಿಯಿಂದ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

'ಚೀನಾಕ್ಕೆ ಕ್ಲೀನ್ ಚಿಟ್‌ ಕೊಟ್ಟಿದ್ದು ಸಾಕು. ಪ್ರಧಾನಿ ಮೋದಿ ಭಾರತದ ಮುಂದೆ ಕ್ಲೀನ್ ಆಗಬೇಕು!' ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ದೇಶದ ಸಶಸ್ತ್ರ ಪಡೆಗಳು ಜನರ ಸಂಪೂರ್ಣ ವಿಶ್ವಾಸವನ್ನು ಹೊಂದಿವೆ. ಆದರೆ, ರಾಷ್ಟ್ರೀಯ ಭದ್ರತೆಯು ಹೊಣೆಗಾರಿಕೆಯನ್ನು ಬಯಸುತ್ತದೆಯೇ ಹೊರತು ಚೀನಾ ನಾಯಕರ ಜೊತೆ ಫೋಟೊ ಸೆಷನ್‌ ಅನ್ನಲ್ಲ. ವಿಪಕ್ಷಗಳ ಮೇಲೆ ದಾಳಿ ನಡೆಸುವ ಬದಲು ಪ್ರಧಾನಿ ಮೋದಿ, ದೇಶ ಮತ್ತು ಸಂಸತ್ತನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದಿದ್ದಾರೆ.

ಭಾರತ ಮತ್ತು ಚೀನಾ ಸೇನೆ ಮುಖಾಮುಖಿ ಮುಂದುವರಿದಿರುವ ಬಗ್ಗೆ ಐಟಿಬಿಪಿ ಡಿಜಿ ಖಚಿತಪಡಿಸಿರುವುದು ಅತ್ಯಂತ ಆಘಾತಕಾರಿ ಸಂಗತಿಯಾಗಿದೆ. ದೊಕ್ಲಾಮ್ ಮತ್ತು ಗಾಲ್ವಾನ್ ರೀತಿಯೇ ಮತ್ತೊಂದು ಗಂಭೀರ ಸಂಘರ್ಷ ನಡೆಯುವುದೇ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries