HEALTH TIPS

Jio IPOಗೆ 7.40 ಲಕ್ಷ ಕೋಟಿ ರೂ. ಬಿಡ್‌; ಅರ್ಜಿಗಳ ಸಂಖ್ಯೆಯಲ್ಲಿ ವಿಶ್ವ ದಾಖಲೆ

ಮುಂಬೈ: ಜಿಯೋ ಪ್ಲಾಟ್‌ಫಾರ್ಮ್ಸ್‌ ನ ಐಪಿಒಗೆ ಹೂಡಿಕೆದಾರರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಟ್ಟು 7.40 ಲಕ್ಷ ಕೋಟಿ ರೂ. ಮೌಲ್ಯದ ಬಿಡ್‌ ಗಳು ಸಲ್ಲಿಕೆಯಾಗಿವೆ. ಭಾರತದ ಅತಿದೊಡ್ಡ ಐಪಿಒ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಷೇರು ಬಿಡುಗಡೆಯು ಅರ್ಜಿಗಳ ಸಂಖ್ಯೆಯಲ್ಲೂ ವಿಶ್ವ ದಾಖಲೆ ನಿರ್ಮಿಸಿದೆ. 


30,213 ಕೋಟಿ ರೂ. ಮೌಲ್ಯದ ಈ ಐಪಿಒಗೆ ಮೂರು ದಿನಗಳಲ್ಲಿ 1.38 ಕೋಟಿಗೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಜಗತ್ತಿನ ಯಾವುದೇ ಐಪಿಒಗೆ ಇಷ್ಟೊಂದು ಅರ್ಜಿಗಳು ಬಂದಿರುವುದು ಇದೇ ಮೊದಲು. ಶುಕ್ರವಾರ ರಾತ್ರಿ 7 ಗಂಟೆಗೆ ಬಿಡ್ಡಿಂಗ್ ಮುಕ್ತಾಯವಾದಾಗ, ಐಪಿಒ 22 ಪಟ್ಟು ಹೆಚ್ಚು ಚಂದಾದಾರಿಕೆ ಪಡೆದಿತ್ತು. ಒಟ್ಟು ಬೇಡಿಕೆಯಲ್ಲಿ ಸುಮಾರು 4.90 ಲಕ್ಷ ಕೋಟಿ ರೂ. ಮೌಲ್ಯದ ಆಯಂಕರ್ ಅಲ್ಲದ ಬಿಡ್‌ ಗಳು ಹಾಗೂ 2.50 ಲಕ್ಷ ಕೋಟಿ ರೂ. ಮೌಲ್ಯದ ಆಯಂಕರ್ ಹೂಡಿಕೆದಾರರ ಬೇಡಿಕೆ ಸೇರಿವೆ.

ಚಿಲ್ಲರೆ ಹೂಡಿಕೆದಾರರಿಂದಲೂ ಉತ್ತಮ ಪ್ರತಿಕ್ರಿಯೆ

ಜಿಯೋ ಐಪಿಒಗೆ ಚಿಲ್ಲರೆ ಹೂಡಿಕೆದಾರರೂ ಹೆಚ್ಚಿನ ಆಸಕ್ತಿ ತೋರಿದ್ದಾರೆ. ಈ ವರ್ಗಕ್ಕೆ ಮೀಸಲಿಟ್ಟಿದ್ದ ಸುಮಾರು 8.5 ಕೋಟಿ ಷೇರುಗಳಿಗೆ ಪ್ರತಿಯಾಗಿ 23 ಕೋಟಿಗೂ ಹೆಚ್ಚು ಷೇರುಗಳಿಗೆ ಬಿಡ್‌ ಗಳು ಸಲ್ಲಿಕೆಯಾಗಿವೆ. ಚಿಲ್ಲರೆ ಹೂಡಿಕೆದಾರರ ವಿಭಾಗದಲ್ಲಿ 2.72 ಪಟ್ಟು ಚಂದಾದಾರಿಕೆ ದಾಖಲಾಗಿದೆ. ಹೀಗಾಗಿ, ಎಷ್ಟು ಹೂಡಿಕೆದಾರರಿಗೆ ಷೇರು ಹಂಚಿಕೆಯಾಗಲಿದೆ ಎಂಬ ಕುತೂಹಲ ಮೂಡಿದೆ.

ಆದರೆ, ಚಂದಾದಾರಿಕೆಯ ಪ್ರಮಾಣವೊಂದೇ ಷೇರು ಹಂಚಿಕೆಯನ್ನು ನಿರ್ಧರಿಸುವುದಿಲ್ಲ. ಮಾನ್ಯ ಅರ್ಜಿಗಳು, ಕನಿಷ್ಠ ಲಾಟ್ ಗಾತ್ರ ಮತ್ತು ಅನ್ವಯವಾಗುವ ಹಂಚಿಕೆ ನಿಯಮಗಳೂ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಸಾಂಸ್ಥಿಕ ಹೂಡಿಕೆದಾರರ ಭಾರಿ ಬೇಡಿಕೆ

ಸಾಂಸ್ಥಿಕ ಹೂಡಿಕೆದಾರರು ಬಿಡ್ಡಿಂಗ್‌ನಲ್ಲಿ ಮುಂಚೂಣಿಯಲ್ಲಿದ್ದರು. ಅರ್ಹ ಸಾಂಸ್ಥಿಕ ಖರೀದಿದಾರರ (QIB) ವಿಭಾಗದಲ್ಲಿ 70.55 ಪಟ್ಟು ಚಂದಾದಾರಿಕೆ ದಾಖಲಾಗಿದೆ. ಸಾಂಸ್ಥಿಕೇತರ ಹೂಡಿಕೆದಾರರ (NII) ವಿಭಾಗದಲ್ಲಿ 14 ಪಟ್ಟು, ರಿಲಯನ್ಸ್ ಇಂಡಸ್ಟ್ರೀಸ್‌ನ ಅರ್ಹ ಷೇರುದಾರರಿಗೆ ಮೀಸಲಾದ ವಿಭಾಗದಲ್ಲಿ 7.60 ಪಟ್ಟು ಚಂದಾದಾರಿಕೆ ಲಭಿಸಿದೆ. ಉದ್ಯೋಗಿಗಳಿಗೆ ಮೀಸಲಾದ ವಿಭಾಗದಲ್ಲಿ 2.93 ಪಟ್ಟು ಚಂದಾದಾರಿಕೆ ದಾಖಲಾಗಿದೆ.

ಘೋಷಿತ ವೇಳಾಪಟ್ಟಿಯ ಪ್ರಕಾರ, ಅಕ್ಟೋಬರ್ 26ರಂದು ಷೇರು ಹಂಚಿಕೆ ನಡೆಯಲಿದ್ದು, ಅಕ್ಟೋಬರ್ 27ರಂದು ಹೂಡಿಕೆದಾರರ ಡಿಮ್ಯಾಟ್ ಖಾತೆಗಳಿಗೆ ಷೇರುಗಳು ಜಮೆಯಾಗಲಿವೆ. ಅಕ್ಟೋಬರ್ 28ರಂದು ಜಿಯೋ ಪ್ಲಾಟ್‌ಫಾರ್ಮ್ಸ್‌ನ ಷೇರುಗಳು ಬಿಎಸ್‌ಇ (BSE) ಮತ್ತು ಎನ್‌ಎಸ್‌ಇ (NSE)ಯಲ್ಲಿ ನೋಂದಣಿಯಾಗಲಿವೆ.

ವಾರೀ ಎನರ್ಜೀಸ್ ದಾಖಲೆ ಪತನ

ಐಪಿಒಗೆ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆಯಲ್ಲಿ ಈ ಹಿಂದೆ ವಾರೀ ಎನರ್ಜೀಸ್ ದಾಖಲೆ ನಿರ್ಮಿಸಿತ್ತು. 2024ರ ಅಕ್ಟೋಬರ್‌ನಲ್ಲಿ ಆ ಕಂಪೆನಿಯ ಐಪಿಒಗೆ 97.3 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದವು. ಜಿಯೋ ಈ ದಾಖಲೆಯನ್ನು ಸುಮಾರು ಶೇ 42ರಷ್ಟು ಮೀರಿಸಿದೆ.

ಜಿಯೋ ಐಪಿಒಗೆ ಮೊದಲ ದಿನ ಸುಮಾರು 30.5 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದವು. ಎರಡನೇ ದಿನದ ಅಂತ್ಯಕ್ಕೆ ಈ ಸಂಖ್ಯೆ 75 ಲಕ್ಷ ದಾಟಿತ್ತು. ಕೊನೆಯ ದಿನ ಹೂಡಿಕೆದಾರರ ಭಾಗವಹಿಸುವಿಕೆ ಮತ್ತಷ್ಟು ಹೆಚ್ಚಾಯಿತು.

ಐಪಿಒದ ಐತಿಹಾಸಿಕ ಮುಕ್ತಾಯವು ಜಿಯೋ ಪ್ಲಾಟ್‌ಫಾರ್ಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಆಕಾಶ್ ಅಂಬಾನಿ ಅವರ ಜನ್ಮದಿನದಂದೇ ನಡೆದಿದೆ. ಅಕ್ಟೋಬರ್ 23ರ ಶುಕ್ರವಾರ ಅವರ ಜನ್ಮದಿನವಾಗಿತ್ತು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries