ಬದಿಯಡ್ಕ: ಇಂಡಿಯನ್ ಕ್ಯಾಥೋಲಿಕ್ ಯೂತ್ ಮೂವ್ಮೆಂಟ್ (ಐಸಿವೈಎಂ) ಸೆಂಟ್ರಲ್ ಕೌನ್ಸಿಲ್-ಡಯೋಸಿಸ್ ಆಫ್ ಮಂಗಳೂರು, ಐಸಿವೈಎಂ ಕಾಸರಗೋಡು ಡಯಾನರಿ ಹಾಗೂ ಐಸಿವೈಎಂ ಬೇಲ ಘಟಕದ ಸಹಯೋಗದಲ್ಲಿ ಕನ್ನೆಪ್ಪಾಡಿ ಪೇಟೆಯಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.
ಕನ್ನೆಪ್ಪಾಡಿ ಮುಂಡಿತ್ತಡ್ಕ ರಸ್ತೆಯ ಬದಿಯಲ್ಲಿದ್ದ ಬಳಕೆಗೆ ಬಾರದ ಪ್ಲಾಸ್ಟಿಕ್ ವಸ್ತುಗಳು ಹಾಗೂ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಯಿತು. ಯುವ ವಿಭಾಗದ ಸ್ವಯಂಸೇವಕರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಪರಿಸರ ಸಂರಕ್ಷಣೆಯ ಸಂದೇಶ ಸಾರಿದರು.

.jpg)
