HEALTH TIPS

ಕೆನಡಾ ಸೇನಾ ನೆಲೆಯಲ್ಲಿ ಸ್ಫೋಟ: ಹಲವರು ಮೃತಪಟ್ಟಿರುವ ಶಂಕೆ

ಟೊರಾಂಟೊ: ಕೆನಡಾದ ಆಲ್ಬರ್ಟಾದಲ್ಲಿನ ಸೇನಾ ನೆಲೆಯಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಹಲವರು ಮೃತಪಟ್ಟಿದ್ದಾರೆ ಮತ್ತು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಅಗ್ನೇಯ ಎಡ್ಮಾಂಟನ್ ನಿಂದ ಸುಮಾರು 180 ಕಿಮೀ ದೂರವಿರುವ ವೈನ್ ರೈಟ್ ಬಳಿಯ ರಕ್ಷಣಾ ನೆಲೆಯೊಂದರಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. 

ಈ ಕುರಿತು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಈ ಪ್ರಾಂತ್ಯದ ಸಂಸದ ಡೇನ್ ಲಾಯ್ಡ್, "ಸ್ಫೋಟ ಮತ್ತು ಅಗ್ನಿ ಅವಘಡದಿಂದ ಗಮನಾರ್ಹ ಪ್ರಮಾಣದ ಸಾವುನೋವು ಸಂಭವಿಸಿದೆ ಎಂಬ ಮಾಹಿತಿಯಿದೆ" ಎಂದು ಹೇಳಿದ್ದಾರೆ.

ವೈನ್ ರೈಟ್ ನಿಂದ ಆಸ್ಪತ್ರೆಗಳಿಗೆ ಕರೆ ತರಲಾಗಿರುವ ರೋಗಿಗಳಿಗೆ ನೆರವು ಒದಗಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಎಡ್ಮಾಂಟನ್ ನ ರಾಯಲ್ ಅಲೆಕ್ಸಾಂಡ್ರಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಡಾ.ವಾರೆನ್ ಥರ್ಸ್ಕ್ ತಿಳಿಸಿದ್ದಾರೆ.

ಸ್ಪೋಟದಿಂದ ಭಾರಿ ಪ್ರಮಾಣದ ಹೊಗೆ ಹೊರ ಬರುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries