HEALTH TIPS

SIR ಬಗ್ಗೆ ನ್ಯಾ. ಭುಯಾನ್ ಹೇಳಿಕೆ ಶಿಷ್ಟಾಚಾರಕ್ಕೆ ವಿರುದ್ಧ: ನಿವೃತ್ತ CJI ಗವಾಯಿ

 ನವದೆಹಲಿ: ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (ಎಸ್‌ಐಆರ್‌) ಕುರಿತು ಸಾರ್ವಜನಿಕವಾಗಿ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಉಜ್ಜಲ್ ಭುಯಾನ್‌ ಅವರ ಹೇಳಿಕೆಗೆ ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಹಾಗೂ ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.


ಎಸ್‌ಐಆರ್‌ ಕುರಿತು ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ಲಿರುವುದರಿಂದ, ಆ ಬಗ್ಗೆ ಹಾಲಿ ನ್ಯಾಯಮೂರ್ತಿಯೊಬ್ಬರು ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತಪಡಿಸುವುದು 'ನ್ಯಾಯಾಂಗ ಶಿಷ್ಟಾಚಾರ'ಕ್ಕೆ ವಿರುದ್ಧ ಎಂದು ನಿವೃತ್ತ ಸಿಜೆಐ ಬಿ.ಆರ್. ಗವಾಯಿ ಹೇಳಿದ್ದಾರೆ.

ನಿವೃತ್ತ ನ್ಯಾಯಮೂರ್ತಿಗಳಾದ ಎಸ್‌.ಎನ್‌. ಧಿಂಗ್ರಾ ಮತ್ತು ಆರ್‌.ಎಸ್‌. ಸೋಧಿ ಕೂಡ ಭುಯಾನ್‌ ಅವರ ಹೇಳಿಕೆಯನ್ನು ಪ್ರಶ್ನಿಸಿದ್ದಾರೆ. ಎಸ್‌ಐಆರ್‌ ಅನ್ನು ಮತದಾನದ ಹಕ್ಕು ಕಸಿದುಕೊಳ್ಳುವ ಪ್ರಕ್ರಿಯೆ ಎಂದು ಕರೆಯುವುದು ಸರಿಯಲ್ಲ. ಮತದಾನದ ಹಕ್ಕು ಕಾನೂನು ನಿಗದಿಪಡಿಸಿರುವ ಅರ್ಹತೆಗಳ ಆಧಾರದಲ್ಲಿರುತ್ತದೆ ಎಂದು ಸೋಧಿ ಹೇಳಿದ್ದಾರೆ.

ಭಾನುವಾರ ನಾಲ್ಸಾರ್‌ ಕಾನೂನು ವಿಶ್ವವಿದ್ಯಾಲಯದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ದೇಶದ ಲಕ್ಷಾಂತರ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಪ್ರಕ್ರಿಯೆಯು ಸಾಂವಿಧಾನಿಕ ಹಕ್ಕಿನ ನಿರಾಕರಣೆಯಾಗಿದೆಭಾರತದ ಸಂವಿಧಾನವು ಎರಡು ವರ್ಗದ ನಾಗರಿಕರನ್ನು ಸೃಷ್ಟಿಸಲು ಅವಕಾಶ ನೀಡುವುದಿಲ್ಲ. ಒಂದು ವರ್ಗದ ನಾಗರಿಕರಿಗೆ ಮತದಾನದ ಹಕ್ಕು ನೀಡಿ ಇನ್ನೊಂದು ವರ್ಗದ ನಾಗರಿಕರಿಗೆ ಮತದಾನದ ಹಕ್ಕು ನಿರಾಕರಿಸುವಂತೆ ಇಲ್ಲ. ದೇಶದ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳುವಿಕೆಗೆ ಕಾರಣವಾಗುವ ಯಾವುದೇ ಪ್ರಕ್ರಿಯೆಯು ಸಂವಿಧಾನದ 326 ಮತ್ತು 14ನೇ ವಿಧಿಗಳ ಉಲ್ಲಂಘನೆಯಾಗುತ್ತದೆ' ಎಂದು ಹೇಳಿದ್ದರು.

'ಲಕ್ಷಾಂತರ ಭಾರತೀಯ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಂಡು, ಅವರನ್ನು ಸ್ವಂತ ದೇಶದಲ್ಲಿ ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡಿದರೆ, ಆ ಪ್ರಕ್ರಿಯೆಯು ಸ್ವೇಚ್ಛಾಚಾರ ಎಂಬುದು ಬಹಳ ಸ್ಪಷ್ಟ. ಯಾವುದೇ ರೀತಿಯ ಚರ್ಚೆಯಿಂದಲೂ ಅದನ್ನು ಸಮರ್ಥಿಸಲು ಸಾಧ್ಯವಿಲ್ಲ. ಅಂತಹ ಪ್ರಕ್ರಿಯೆಯು ಸಂವಿಧಾನದ ಹೃದಯಕ್ಕೆ ಹೊಡೆತ ನೀಡುತ್ತದೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಮತದಾರರ ಪಟ್ಟಿಯ ಎಸ್‌ಐಆರ್‌ ಪ್ರಕ್ರಿಯೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳು ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿವೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries