HEALTH TIPS

ರಾಜ್ಯಸಭಾ ಚುನಾವಣೆ: ಕೇಂದ್ರ ಸಚಿವ ಪುರಿ, ಅರುಣ್‌ ಸಿಂಗ್‌ಗೆ ಟಿಕೆಟ್‌ ಇಲ್ಲ

ನವದೆಹಲಿ: ಉತ್ತರ ಪ್ರದೇಶದಲ್ಲಿ ನಡೆಯಲಿರುವ ರಾಜ್ಯಸಭಾ ಚುನಾವಣೆಗೆ ಎಂಟು ಅಭ್ಯರ್ಥಿಗಳ ಹೆಸರುಗಳನ್ನು ಬಿಜೆಪಿ ಸೋಮವಾರ ಪ್ರಕಟಿಸಿದೆ.


ಕೇಂದ್ರ ಸಚಿವರಾದ ಹರ್ದೀಪ್‌ ಸಿಂಗ್‌ ಪುರಿ, ಬಿ.ಎಲ್‌.ವರ್ಮಾ ಹಾಗೂ ಈ ಹಿಂದೆ ಕರ್ನಾಟಕದ ಬಿಜೆಪಿ ಉಸ್ತುವಾರಿಯಾಗಿದ್ದ ಅರುಣ್‌ ಸಿಂಗ್‌ ಅವರಿಗೆ ಪಕ್ಷ ಟಿಕೆಟ್‌ ನಿರಾಕರಿಸಿದೆ.

ಕೇಂದ್ರ ಸಚಿವರಾದ ಜಾರ್ಜ್‌ ಕುರಿಯನ್‌ ಹಾಗೂ ರವನೀತ್‌ ಸಿಂಗ್‌ ಬಿಟ್ಟೂ ಅವರಿಗೂ ಪಕ್ಷವು ಈ ಹಿಂದೆ ಟಿಕೆಟ್‌ ನೀಡಿರಲಿಲ್ಲ. ಹರ್ದೀಪ್‌ ಸಿಂಗ್‌ ಅವರು 2017ರಿಂದ ಕೇಂದ್ರ ಸಂಪುಟದಲ್ಲಿದ್ದಾರೆ. ಬಿ.ಎಲ್‌.ವರ್ಮಾ ಅವರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಸಂಭವ ಇದೆ. ಮುಂದಿನ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿದೆ.

ಉತ್ತರ ಪ್ರದೇಶದ ಸಚಿವ ಧರಮ್‌ಪಾಲ್ ಸಿಂಗ್, ರಾಧಾಕಾಂತ್ ಓಜಾ, ಪ್ರಕಾಶ್ ಪಾಲ್, ವಿದ್ಯಾಸಾಗರ್ ಸೋಂಕರ್, ಗೋಪಿಕೃಷ್ಣ ಪಾಂಡೆ, ಪ್ರಿಯಾಂಕಾ ಸಿಂಗ್ ರಾವತ್, ರಾಮ್ ಪ್ರತಾಪ್ ಸಿಂಗ್ ಚೌಹಾಣ್ ಮತ್ತು ಶ್ರುತಿ ಗಂಗ್ವಾರ್ ಪಕ್ಷದ ಅಭ್ಯರ್ಥಿಗಳು. ಮೂವರು ಒಬಿಸಿ, ಇಬ್ಬರು ಬ್ರಾಹ್ಮಣರು, ಇಬ್ಬರು ದಲಿತರು ಮತ್ತು ಠಾಕೂರ್ ಸಮುದಾಯದ ಒಬ್ಬರಿಗೆ ಟಿಕೆಟ್‌ ನೀಡಲಾಗಿದೆ. ಸಾಮಾಜಿಕ, ಪ್ರಾದೇಶಿಕ ಮತ್ತು ಜಾತಿ ಸಮೀಕರಣಗಳ ಸಮತೋಲನ ಗಮನದಲ್ಲಿ ಇಟ್ಟುಕೊಂಡು ಪಕ್ಷವು ಈ ಅಭ್ಯರ್ಥಿಗಳ ಹೆಸರುಗಳನ್ನು ಅನುಮೋದಿಸಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳದ ಒಟ್ಟು 12 ರಾಜ್ಯಸಭಾ ಸ್ಥಾನಗಳಿಗೆ ಇದೇ 16ರಂದು ಚುನಾವಣೆ ನಡೆಯಲಿದೆ. 







 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries