HEALTH TIPS

ಲೈಂಗಿಕ ಶೋಷಣೆ ಆರೋಪ: ಮುಂದುವರಿದ ಪತ್ರಕರ್ತರ ಧರಣಿ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧದ ಪ್ರತಿಭಟನೆ ಸಂದರ್ಭದಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಪೊಲೀಸ್ ಸಿಬ್ಬಂದಿ ಮತ್ತು ಸಹಾಯಕ ಪೊಲೀಸ್ ಕಮಿಷನರ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆ ಹೊರಗಡೆ ಮೂರನೇ ದಿನವಾದ ಸೋಮವಾರವೂ ಪತ್ರಕರ್ತರ ಪ್ರತಿಭಟನೆ ಮುಂದುವರಿಯಿತು. 


ಪ್ರತಿಭಟನೆ ವೇಳೆ ತಮ್ಮ ಮೇಲೆ ಪೊಲೀಸರಿಂದ ಹಲ್ಲೆ ನಡೆದಿದೆ ಎಂದು ಮೂವರು ಪತ್ರಕರ್ತೆಯರು ಆರೋಪಿಸಿದ್ದರು. ಕೂಲಂಕಷ ತನಿಖೆಗಾಗಿ ಪ್ರಕರಣವನ್ನು ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿದ್ದರೂ, ಯಾವುದೇ ಎಫ್‌ಐಆರ್ ದಾಖಲಾಗಿಲ್ಲ.

'ಪೊಲೀಸರು ಮತ್ತೆ ಮತ್ತೆ ಸಮಯ ಕೇಳುತ್ತಿದ್ದಾರೆಯೇ ಹೊರತು ಎಫ್‌ಐಆರ್ ದಾಖಲಿಸುತ್ತಿಲ್ಲ. ನಾವು ಕಾಯುತ್ತಲೇ ಇದ್ದೇವೆ. ನಮ್ಮನ್ನು ಠಾಣೆಯ ಒಳಗೆ ಬಿಡುತ್ತಿಲ್ಲ. ಸೋಮವಾರ ಬೆಳಿಗ್ಗೆ, 20 ನಿಮಿಷ ಕಾಯುವಂತೆ ತಿಳಿಸಿದರು. ಬಳಿಕ ಏಕಾಏಕಿ ನಮ್ಮನ್ನು ವಶಕ್ಕೆ ಪಡೆದು ಬಸ್‌ಗೆ ಹತ್ತಿಸಿದರು. ನಮ್ಮಲ್ಲಿ ಕೆಲವರಿಗೆ ಗಾಯಗಳೂ ಆಗಿವೆ' ಎಂದು ದೂರುದಾರರಲ್ಲಿ ಒಬ್ಬರು ತಿಳಿಸಿದರು.

ಇನ್ನೊಂದೆಡೆ, ನ್ಯಾಷನಲ್ ಸ್ಟುಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ) ವತಿಯಿಂದ ಇಲ್ಲಿನ ರೈಸಿನಾ ರಸ್ತೆಯಲ್ಲಿರುವ ಪ‍್ರಧಾನ ‍ಕಚೇರಿ ಬಳಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಯಿತು.

ಮತಗಳವು ಆರೋಪ ಎದುರಿಸುತ್ತಿರುವ ಜ್ಞಾನೇಶ್ ಕುಮಾರ್ ಅವರು ರಾಜೀನಾಮೆ ನೀಡಬೇಕು ಮತ್ತು ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಅಣಕು ಶವಯಾತ್ರೆ ನಡೆಯಿತು.

'ಮತಗಳವು ಸಹಿಸಲಾಗದು, ಜನರ ಧ್ವನಿ ಹತ್ತಿಕ್ಕಲಾಗದು' ಎಂದು ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.

ಭದ್ರತಾ ಸಿಬ್ಬಂದಿಗೆ ಇರಿತ

ಪ್ರತಿಭಟನೆ ವೇಳೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಜವಾನರೊಬ್ಬರಿಗೆ ಚೂಪಾದ ವಸ್ತುವಿನಿಂದ ಇರಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 'ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ಸಂದರ್ಭದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದ್ದಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries