HEALTH TIPS

ರಾಹುಲ್ ಗಾಂಧಿ ಅಮೆರಿಕ ಪ್ರವಾಸದ ಸುತ್ತ ಮತ್ತೆ ವಿವಾದ: ನವೆಂಬರ್ 16 ರಿಂದ 19 ರವರೆಗೆ ಯುಎಸ್ ಭೇಟಿಗೆ ಸಿದ್ಧತೆ ಎಂದು ಬಿಜೆಪಿ ಆರೋಪ; ಅರಾಜಕತಾವಾದಿಗಳ ಜತೆಗಿನ ರಜಾದಿನದ ಮೋಜು ಎಂದು ಲೇವಡಿ

 ಥೈಲ್ಯಾಂಡ್ ಭೇಟಿಯ ಬೆನ್ನಲ್ಲೇ ವಿದೇಶ ಪ್ರವಾಸವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್–ಬಿಜೆಪಿ ನಡುವೆ ತಾರಕಕ್ಕೇರಿದ ರಾಜಕೀಯ ಸಮರ.

ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತೆ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಆರೋಪಿಸಿ ಬಿಜೆಪಿ ವಾಗ್ದಾಳಿ ನಡೆಸಿದೆ. ನವೆಂಬರ್ 16 ರಿಂದ 19 ರ ನಡುವೆ ರಾಹುಲ್ ಗಾಂಧಿ ಅಮೆರಿಕ ಪ್ರವಾಸಕ್ಕೆ ಯೋಜಿಸುತ್ತಿದ್ದು, ಇದು ದೇಶವಿರೋಧಿ ಅರಾಜಕತಾವಾದಿಗಳ ಜೊತೆಗಿನ ಮತ್ತೊಂದು ರಜಾದಿನದ ಮೋಜುಕೂಟ ಎಂದು ಬಿಜೆಪಿ ನಾಯಕತ್ವ ಕಿಡಿಕಾರಿದೆ. 


ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಗಳು ನಡೆಯುತ್ತಿದ್ದ ಸಂದರ್ಭದಲ್ಲೇ, ಕಳೆದ ತಿಂಗಳು ರಾಹುಲ್ ಗಾಂಧಿ ಕೈಗೊಂಡಿದ್ದ ಥೈಲ್ಯಾಂಡ್ ಭೇಟಿ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಿದೇಶ ಪ್ರವಾಸ ಮತ್ತು ವಿದೇಶಿ ಸಂಪರ್ಕಗಳ ಕುರಿತ ಆರೋಪ-ಪ್ರತ್ಯಾರೋಪಗಳು ಮತ್ತಷ್ಟು ತೀವ್ರಗೊಂಡಿವೆ.

ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸಗಳನ್ನು ಬೆಟ್ಟುಮಾಡಿದ್ದ ರಾಹುಲ್ ಗಾಂಧಿ, ಮೋದಿಯವರಿಗೆ ವಿದೇಶಿ ಶಕ್ತಿಗಳ ಬೆಂಬಲವಿದೆ ಎಂದು ಆರೋಪಿಸುವ ಮೂಲಕ ಈ ರಾಜಕೀಯ ವಾಕ್ಸಮರಕ್ಕೆ ನಾಂದಿ ಹಾಡಿದ್ದರು. ಇದಕ್ಕೆ ತಕ್ಷಣವೇ ಪ್ರತ್ಯುತ್ತರ ನೀಡಿದ ಬಿಜೆಪಿ, ರಾಹುಲ್ ಗಾಂಧಿ ಅವರ ವಿದೇಶ ಭೇಟಿಗಳ ಸುತ್ತಲೇ ನಿಗೂಢತೆ ಅಡಗಿದೆ ಎಂದು ಆರೋಪಿಸಿತು. ಇದೀಗ ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಅವರು ರಾಹುಲ್ ಗಾಂಧಿ ವಿರುದ್ಧ ನೇರ ಮುಗಿಬಿದ್ದಿದ್ದು, ಅವರ ಮುಂಬರುವ ಅಮೆರಿಕ ಪ್ರವಾಸದ ಉದ್ದೇಶವನ್ನು ಪ್ರಶ್ನಿಸಿದ್ದಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries