HEALTH TIPS

‘ಪ್ರಬುದ್ಧರ ನಡುವೆ ಸಂವಾದ ನಡೆಯಬೇಕು, ಆ ಪದ ರಾಹುಲ್ ಗಾಂಧಿಗೆ ಇಂದಿಗೂ ಅಪರಿಚಿತ’: ಮೋದಿಗೆ ಹಾಕಿದ ಬಹಿರಂಗ ಚರ್ಚೆಯ ಸವಾಲು ತಳ್ಳಿಹಾಕಿದ ಬಿಜೆಪಿ

ಧಾರ್ಮಿಕ ಮೂಲಭೂತವಾದಿಗಳು ಜಾತ್ಯತೀತತೆಯ ಬಗ್ಗೆ ಮಾತನಾಡಿದಂತಿದೆ ರಾಹುಲ್ ಗಾಂಧಿ ಅವರ ಸವಾಲು ಎಂದು ಕಿರಣ್ ರಿಜಿಜು ಲೇವಡಿ.

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸಂವಾದಕ್ಕೆ ಬರುವಂತೆ ರಾಹುಲ್ ಗಾಂಧಿ ಹಾಕಿದ್ದ ಬಹಿರಂಗ ಸವಾಲನ್ನು ಬಿಜೆಪಿ ಸಾರಾಸಗಟಾಗಿ ತಳ್ಳಿಹಾಕಿದೆ. ಪ್ರಬುದ್ಧರ ನಡುವೆ ಸಂವಾದ ನಡೆಯಬೇಕೇ ಹೊರತು ಅಪಕ್ವರ ಜತೆಗಲ್ಲ; ಆ ‘ಪ್ರಬುದ್ಧತೆ’ ಎಂಬ ಪದ ರಾಹುಲ್ ಗಾಂಧಿಗೆ ಇಂದಿಗೂ ಅಪರಿಚಿತ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದ್ದಾರೆ.


ಕೈಯಲ್ಲಿ ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡು ದೇಶದಲ್ಲಿ ಗಲಭೆಗಳನ್ನು ಸೃಷ್ಟಿಸುವ ಅರಾಜಕತಾವಾದಿ ರಾಹುಲ್ ಗಾಂಧಿ ಎಂದು ಜರೆದ ರಿಜಿಜು, ಧಾರ್ಮಿಕ ಮೂಲಭೂತವಾದಿಗಳು ಜಾತ್ಯತೀತತೆಯ ಬಗ್ಗೆ ಭಾಷಣ ಬಿಗಿದಂತೆ ರಾಹುಲ್ ಅವರ ಸವಾಲಿದೆ ಎಂದು ಕುಟುಕಿದರು. ಕಾಂಗ್ರೆಸ್ ಇದೇ ರೀತಿಯ ಅರಾಜಕತೆಯನ್ನು ಮುಂದುವರಿಸಿದರೆ, ದೇಶದ ಜನರೇ ಪರ್ಯಾಯ ವಿರೋಧ ಪಕ್ಷವನ್ನು ಹುಡುಕಿಕೊಳ್ಳಲಿದ್ದಾರೆ ಎಂದು ಸಂಸದ ಗೌರವ್ ಭಾಟಿಯಾ ಎಚ್ಚರಿಸಿದರು. ಇತ್ತ, ಹೊರಗೆ ಬೀದಿಯಲ್ಲಿ ನಿಂತು ಸವಾಲು ಹಾಕುವ ಬದಲು ಸಂಸತ್ತಿಗೆ ಬಂದು ಎಸ್‌ಐಆರ್ (ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ) ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಗ್ರಹಿಸಿದರು. ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದ್ದರೂ ರಾಹುಲ್ ಏಕೆ ಮೌನವಾಗಿದ್ದಾರೆ ಎಂದೂ ಅವರು ಪ್ರಶ್ನಿಸಿದರು.

ವಿದೇಶಿ ಶಕ್ತಿಗಳೊಂದಿಗೆ ನಂಟು ಹೊಂದಿದ್ದಾರೆ ಎಂಬ ಆರೋಪವನ್ನು ಮುಂದಿಟ್ಟುಕೊಂಡು ರಾಹುಲ್ ಗಾಂಧಿ ಪ್ರಧಾನಿ ಮೋದಿಯವರನ್ನು ಬಹಿರಂಗ ಸಂವಾದಕ್ಕೆ ಆಹ್ವಾನಿಸಿದ್ದರು. ರಾಹುಲ್ ಗಾಂಧಿ ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸಿ ದೇಶಕ್ಕೆ ದ್ರೋಹ ಬಗೆಯುತ್ತಿದ್ದಾರೆ ಎಂದು ಬಿಜೆಪಿ ಆರೋಪಗಳನ್ನು ತೀವ್ರಗೊಳಿಸುತ್ತಿದ್ದ ಬೆನ್ನಲ್ಲೇ, ರಾಹುಲ್ ಅದೇ ಅಸ್ತ್ರವನ್ನು ಮೋದಿಯವರ ವಿರುದ್ಧ ಪ್ರಯೋಗಿಸಿದ್ದರು. ವಿದೇಶಿ ಶಕ್ತಿಗಳ ನೆರವಿನಿಂದಲೇ ನರೇಂದ್ರ ಮೋದಿ ಪ್ರಧಾನಿಯಾಗಿ ಮುಂದುವರಿಯುತ್ತಿದ್ದಾರೆ ಎಂದು ಆರೋಪಿಸಿದ್ದ ರಾಹುಲ್, ಅದು ಸುಳ್ಳೆಂದು ಸಾಬೀತುಪಡಿಸಲು ಮೋದಿಗೆ ಸವಾಲು ಹಾಕಿದ್ದರು. 24 ಗಂಟೆ ಕಳೆದರೂ ಪ್ರಧಾನಿ ಮೌನ ವಹಿಸಿದ್ದಾರೆ ಎಂದು ಆರೋಪಿಸಿ ಅವರು ನಿನ್ನೆ ಈ ಹೊಸ ಸವಾಲನ್ನು ಮುಂದಿಟ್ಟಿದ್ದರು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries