HEALTH TIPS

ಉಪ್ಪಳ ವಲಯ ಸಂಯುಕ್ತ ಜಮಾಅತ್ ಖಾಜಿಯಾಗಿ ಕೊಯ್ಯೋಡು ಉಮರ್ ಮುಸ್ಲಿಯಾರ್; 19ರಂದು ಪದಗ್ರಹಣ ಸಮಾರಂಭ


ಉಪ್ಪಳ ಅಹ್ಲೇ ಸುನ್ನತ್ ಹನಫಿ ಜಾಮಿಯಾ ಮಸೀದಿ ಆವರಣದಲ್ಲಿ ಕಾರ್ಯಕ್ರಮ; ಸಮಸ್ತ ಅಧ್ಯಕ್ಷ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕ್ಕೋಯ ತಂಙಳ್ ಸೇರಿದಂತೆ ಗಣ್ಯರ ಭಾಗಿ

ಉಪ್ಪಳ: ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಕೊಯ್ಯೋಡು ಪಿ.ಪಿ. ಉಮರ್ ಮುಸ್ಲಿಯಾರ್ ಅವರು ಉಪ್ಪಳ ವಲಯ ಸಂಯುಕ್ತ ಜಮಾಅತ್‌ನ ನೂತನ ಖಾಜಿಯಾಗಿ ಪದಗ್ರಹಣ ಮಾಡಲಿದ್ದಾರೆ. ಈ ಐತಿಹಾಸಿಕ ಸಮಾರಂಭವು ಇದೇ 19ರಂದು ಗುರುವಾರ ಬೆಳಿಗ್ಗೆ 10 ಗಂಟೆಗೆ ಉಪ್ಪಳದ ಅಹ್ಲೇ ಸುನ್ನತ್ ಹನಫಿ ಜಾಮಿಯಾ ಮಸೀದಿ ಆವರಣದ 'ಕೆ. ಆಲಿಕುಟ್ಟಿ ಉಸ್ತಾದ್ ನಗರ'ದಲ್ಲಿ ನಡೆಯಲಿದೆ ಎಂದು ಜಮಾಅತ್ ಪದಾಧಿಕಾರಿಗಳು ಕುಂಬಳೆ ಪ್ರೆಸ್ ಫೋರಂನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಹಿಂದಿನ ಖಾಜಿ ಪ್ರೊ. ಕೆ. ಆಲಿಕುಟ್ಟಿ ಮುಸ್ಲಿಯಾರ್ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಕೊಯ್ಯೋಡು ಉಮರ್ ಮುಸ್ಲಿಯಾರ್ ಅವರನ್ನು ನೇಮಕ ಮಾಡಲಾಗಿದೆ. ಸಮಾರಂಭದಲ್ಲಿ ಸಮಸ್ತ ಅಧ್ಯಕ್ಷ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕ್ಕೋಯ ತಂಙಳ್, ಸಯ್ಯಿದ್ ಕೆ.ಎಸ್. ಅಲಿ ತಂಙಳ್ ಕುಂಬೋಲ್, ಪಾಣಕ್ಕಾಡ್ ಸಯ್ಯಿದ್ ಅಬ್ಬಾಸಲಿ ಶಿಹಾಬ್ ತಂಙಳ್ ಸೇರಿದಂತೆ ನಾಡಿನ ಪ್ರಮುಖ ಧಾರ್ಮಿಕ ಪಂಡಿತರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಜಮಾಅತ್ ಅಧ್ಯಕ್ಷ ಸಿರಾಜುದ್ದೀನ್ ಫೈಝಿ ಚೇರಾಲ್, ಕಾರ್ಯದರ್ಶಿ ಟಿ.ಎ. ಮೂಸಾ ಪತ್ವಾಡಿ, ಖಜಾಂಚಿ ಅಬ್ದುಲ್ ಮಜೀದ್ ದಾರಿಮಿ ಪಯ್ಯಕ್ಕಿ ಮತ್ತಿತರರು ಉಪಸ್ಥಿತರಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries