ನಟ ಮರಿಮಾಯಂ ಉಣ್ಣಿರಾಜ ಅವರಿಂದ ಅನಾವರಣ; 2026ರ ಡಿಸೆಂಬರ್‌ನಿಂದ 2027ರ ಏಪ್ರಿಲ್‌ವರೆಗೆ ವರ್ಷವಿಡೀ ವಿವಿಧ ಕಾರ್ಯಕ್ರಮ
ಬದಿಯಡ್ಕ: "ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ವಿಭಿನ್ನವಾದ ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಸೂಕ್ತ ಪ್ರೋತ್ಸಾಹ ನೀಡುವ ಮೂಲಕ ಬೆಳೆಸಿಕೊಳ್ಳಲು ಅವಕಾಶ ಕಲ್ಪಿಸಬೇಕು," ಎಂದು ಖ್ಯಾತ ನಟ ಮರಿಮಾಯಂ ಉಣ್ಣಿರಾಜ ಹೇಳಿದರು.
ಪೆರಡಾಲ ಸರ್ಕಾರಿ ಪ್ರೌಢಶಾಲೆಯ (ಜಿ.ಎಚ್.ಎಸ್.) ಶತಮಾನೋತ್ಸವ ಆಚರಣೆಯ ಲಾಂಛನವನ್ನು ಅನಾವರಣಗೊಳಿಸಿ ಅವರು ಮಾತನಾಡಿದರು. 2026ರ ಡಿಸೆಂಬರ್‌ನಲ್ಲಿ ಆರಂಭಗೊಂಡು 2027ರ ಏಪ್ರಿಲ್ ಮೊದಲ ವಾರದಲ್ಲಿ ಸಮಾಪ್ತಿಗೊಳ್ಳಲಿರುವ ಶತಮಾನೋತ್ಸವದ ವಿವಿಧ ಕಾರ್ಯಕ್ರಮಗಳಲ್ಲಿ ತಾನೂ ಸಕ್ರಿಯವಾಗಿ ಭಾಗವಹಿಸುವುದಾಗಿ ಅವರು ಭರವಸೆ ನೀಡಿದರು.
ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ. ಶಂಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಮುಖ್ಯೋಪಾಧ್ಯಾಯಿನಿ ಸೌರಭ, ಪ್ರಮುಖರಾದ ಮಾಹಿನ್ ಕೇಳೋಟ್, ರಾಮಪ್ಪ ಮಂಜೇಶ್ವರ, ಅವಿನಾಶ್ ರೈ, ಅಶ್ರಫ್ ಪಳ್ಳಿಕಂಡಮ್, ರವಿ ನವಶಕ್ತಿ, ಶ್ಯಾಮ್ ಪ್ರಸಾದ್ ಮಾನ್ಯ, ಹಮೀದ್ ಕೆಡೆಂಜಿ, ರಾಜೇಶ್ ಆಳ್ವ, ಶ್ರೀಧರ ಮಾಸ್ಟರ್, ಅಖಿಲೇಶ್ ನಗುಮುಗಂ, ಚಂದ್ರಹಾಸ ನಂಬ್ಯಾರ್, ಚಂದ್ರಶೇಖರ ಕುರುಪ್, ಅನ್ವರ್, ಶಾಹಿನಾ, ಅನ್ನಥಾ, ಸುಬಿದ, ತಾರಾನಾಥ ರೈ, ಇಬ್ರಾಹಿಂ, ಶ್ಯಾಮ್ ಪ್ರಸಾದ್, ಬದರುದ್ದೀನ್ ಹಾಗೂ ಜಸೀಲಾ ಉಪಸ್ಥಿತರಿದ್ದರು.



