HEALTH TIPS

24 ಗಂಟೆಯೊಳಗೆ ಕಿಲಿಮಂಜರೊ ಏರಿ, ಇಳಿದ ಮೊದಲ ಭಾರತೀಯ ಪರ್ವತಾರೋಹಿ ಕವಿತಾ ಚಾಂದ್

 ನವದೆಹಲಿ: ಆಫ್ರಿಕಾದ ಅತ್ಯಂತ ಎತ್ತರದ ಕಿಲಿಮಂಜರೊ ಪರ್ವತವನ್ನು ಏರಿ, 24 ಗಂಟೆಗಳೊಳಗೆ ಮತ್ತೆ ಆರಂಭಿಕ ಸ್ಥಳಕ್ಕೆ ಮರಳುವ ಮೂಲಕ ಭಾರತೀಯ ಪರ್ವತಾರೋಹಿ ಕವಿತಾ ಚಾಂದ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಪರ್ವತಾರೋಹಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.


ಕವಿತಾ ಅವರು ಒಟ್ಟು 22 ಗಂಟೆ 36 ನಿಮಿಷಗಳಲ್ಲಿ ಪರ್ವತಾರೋಹಣ ಪೂರ್ಣಗೊಳಿಸಿದ್ದಾರೆ. 5,895 ಮೀಟರ್ ಎತ್ತರದ ಕಿಲಿಮಂಜರೊ ಶಿಖರವನ್ನು ತಲುಪಲು ಅವರು ತೆಗೆದುಕೊಂಡ ಸಮಯ ಕೇವಲ 12 ಗಂಟೆ 46 ನಿಮಿಷ. ಮ್ವೇಕಾ ಗೇಟ್-ಉರುಹು ಪೀಕ್-ಮ್ವೇಕಾ ಗೇಟ್ ಮಾರ್ಗದಲ್ಲಿ ಪರ್ವತ ಏರಿದ ಅವರು, ಶಿಖರ ತಲುಪಿದ ಬಳಿಕ ಆರಂಭಿಕ ಸ್ಥಳಕ್ಕೆ ಮರಳಿದ್ದಾರೆ. ಇಷ್ಟು ಕಡಿಮೆ ಅವಧಿಯಲ್ಲಿ ಪರ್ವತ ಏರಿರುವುದು ಅಸಾಧಾರಣ ಚಾರಣ ಸಾಧನೆಯಾಗಿದೆ.

ಸಾಮಾನ್ಯವಾಗಿ ಕಿಲಿಮಂಜರೊ ಪರ್ವತವನ್ನು ಏರಿ, ಇಳಿಯಲು ಐದರಿಂದ ಒಂಭತ್ತು ದಿನಗಳು ಬೇಕಾಗುತ್ತವೆ. ಪರ್ವತಾರೋಹಿಗಳು ಕ್ರಮೇಣ ಎತ್ತರಕ್ಕೆ ಹೊಂದಿಕೊಳ್ಳಲು ಈ ಸಮಯ ಅಗತ್ಯವಾಗಿರುತ್ತದೆ. ಆದರೆ, ಕವಿತಾ ಅವರು 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಈ ಸಾಹಸ ಪೂರ್ಣಗೊಳಿಸಿರುವುದು ಅವರ ಕಠಿಣ ಪರಿಶ್ರಮ ಮತ್ತು ಸುದೀರ್ಘ ಸಿದ್ಧತೆಗೆ ಸಾಕ್ಷಿಯಾಗಿದೆ.

►ಮೂರು ತಿಂಗಳ ಕಠಿಣ ತರಬೇತಿ

ಕಿಲಿಮಂಜರೊ ಪರ್ವತಾರೋಹಣದ ಹಿಂದೆ ಕವಿತಾ ಅವರ ಮೂರು ತಿಂಗಳ ಕಠಿಣ ತರಬೇತಿ ಹಾಗೂ ವ್ಯವಸ್ಥಿತ ಸಿದ್ಧತೆ ಇದೆ. ಅಕ್ಟೋಬರ್ 11ರಂದು ನಡೆದ ಚಿಕಾಗೊ ಮ್ಯಾರಥಾನ್ ನಲ್ಲಿ ಭಾಗವಹಿಸುವುದಕ್ಕೂ ಮುನ್ನ ಅವರು ಪ್ರತಿ ವಾರ 70ರಿಂದ 80 ಕಿ.ಮೀ. ಓಡುತ್ತಿದ್ದರು. ಅಲ್ಲದೆ, ವಾರದಲ್ಲಿ ಮೂರು ಬಾರಿ ಸಾಮರ್ಥ್ಯ ಪರೀಕ್ಷೆಗೂ ಒಳಗಾಗುತ್ತಿದ್ದರು.

ಚಿಕಾಗೊ ಮ್ಯಾರಥಾನ್ನಲ್ಲಿ ಅತ್ಯಂತ ವೇಗವಾಗಿ ಓಡಿದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆಗೂ ಕವಿತಾ ಚಾಂದ್ ಪಾತ್ರರಾಗಿದ್ದರು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries