HEALTH TIPS

ರಾಮನ ಪ್ರಯಾಣದಿಂದ ಪ್ರೇರಿತ: ರಾಮೇಶ್ವರಂನಿಂದ ಅಯೋಧ್ಯೆಗೆ 2,500 KM ಸೈಕಲ್ ಸವಾರಿ

ಅಯೋಧ್ಯೆ: ರಾಮಾಯಣದಲ್ಲಿ ರಾವಣನನ್ನು ಸೋಲಿಸಿದ ನಂತರ ರಾಮನು, ರಾಮೇಶ್ವರಂನಿಂದ ಅಯೋಧ್ಯೆಗೆ ಕೈಗೊಂಡ ಪ್ರಯಾಣದಿಂದ ಪ್ರೇರಣೆ ಪಡೆದು ನೋಯ್ಡಾದ 30 ವರ್ಷದ ಯುವಕನೊಬ್ಬ ದೀಪಾವಳಿಗೂ ಮುನ್ನ 16 ದಿನಗಳಲ್ಲಿ 7 ರಾಜ್ಯಗಳನ್ನು ಹಾದು, ತಮಿಳುನಾಡಿನಿಂದ ಉತ್ತರ ಪ್ರದೇಶದವರೆಗೆ 2,500 ಕಿಲೋಮೀಟರ್ ಸೈಕಲ್ ಸವಾರಿ ಮಾಡಿದ್ದಾರೆ. 


ಸಾರ್ಥಕ್ ಚೌಹಾಣ್ ಎನ್ನುವ ಯುವಕ ಈ ಸೈಕಲ್ ಸವಾರಿ ಮಾಡಿದ್ದಾರೆ. ಈ ಕುರಿತು ಪಿಟಿಐ ಜೊತೆ ಮಾತನಾಡಿರುವ ಅವರು, 'ನಾನು ಸತತ ಮೂರನೇ ವರ್ಷ ಈ ಸುದೀರ್ಘ ಪ್ರಯಾಣ ಮಾಡುತ್ತಿದ್ದೇನೆ. ಇದು ಭಾರತದ ವೈವಿಧ್ಯತೆ ಮತ್ತು ಸಂಸ್ಕೃತಿಯನ್ನು ಅನುಭವಿಸಲು ಸಿಕ್ಕ ಅತ್ಯುತ್ತಮ ಅವಕಾಶ' ಎಂದು ಹೇಳಿದ್ದಾರೆ.

'ನಾನು ಶುಕ್ರವಾರ(ನ.6) ಅಯೋಧ್ಯೆ ತಲುಪಿದೆ. 16 ದಿನಗಳಲ್ಲಿ 7 ರಾಜ್ಯಗಳನ್ನು ಹಾದು, ರಾಮೇಶ್ವರಂನಿಂದ ಅಯೋಧ್ಯೆಗೆ 2,500 ಕಿಲೋಮೀಟರ್ ಸೈಕಲ್ ಚಲಾಯಿಸಿದ್ದೇನೆ. ದಸರಾದಂದು ರಾವಣನನ್ನು ಸೋಲಿಸಿದ ಬಳಿಕ ರಾಮನು ರಾಮೇಶ್ವರಂನಲ್ಲಿ ಪೂಜೆ ಸಲ್ಲಿಸಿ, ದೀಪಾವಳಿ ಹಾಗೂ ದೀಪೋತ್ಸವದ ವೇಳೆಗೆ ಅಯೋಧ್ಯೆಗೆ ಆಗಮಿಸಿದಂತೆಯೇ, ನಾನು ಸಹ ಅದೇ ಮಾರ್ಗವನ್ನು ಆಯ್ದುಕೊಂಡೆ. ಪ್ರತಿ ವರ್ಷ ದಸರಾದಂದು ರಾಮೇಶ್ವರಂನಲ್ಲಿ ಪ್ರಾರ್ಥನೆ ಸಲ್ಲಿಸಿ ಈ ಪ್ರಯಾಣ ಆರಂಭಿಸುತ್ತೇನೆ ಮತ್ತು ದೀಪೋತ್ಸವದ ವೇಳೆಗೆ ಅಯೋಧ್ಯೆ ತಲುಪುತ್ತೇನೆ' ಎಂದು ಹೇಳಿದ್ದಾರೆ.

ಕಳೆದ ಬಾರಿ ನಾನು ಸೈಕ್ಲಿಂಗ್ ತಂಡದೊಂದಿಗೆ ಪ್ರಯಾಣಿಸಿದ್ದೆ. ಆದರೆ ಈ ಬಾರಿ ಏಕಾಂಗಿಯಾಗಿ ಸವಾರಿ ಮಾಡಲು ನಿರ್ಧರಿಸಿ, ಯಶಸ್ವಿಯಾಗಿದ್ದೇನೆ. ಮುಂದಿನ ವರ್ಷ ನಮ್ಮ ತಂಡದ ಸುಮಾರು 50 ಸೈಕಲ್ ಸವಾರರೊಂದಿಗೆ ರಾಮೇಶ್ವರಂನಿಂದ ಅಯೋಧ್ಯೆಯವರೆಗೆ ಸೈಕಲ್ ಸವಾರಿ ಮಾಡಲು ಯೋಜನೆ ರೂಪಿಸಿಕೊಂಡಿದ್ದೇನೆ. ಕೆನಡಾ ಮತ್ತು ಇಂಗ್ಲೆಂಡ್‌ನ ನಾಗರಿಕರೂ ಸಹ ಈ ಪ್ರಯಾಣ ಕೈಗೊಳ್ಳಲು ಆಸಕ್ತಿ ತೋರಿದ್ದಾರೆ ಎಂದು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries