ತಿರುವನಂತಪುರಂ: ಕೇರಳ ರಾಜ್ಯದ ಕ್ರಿಸ್ಮಸ್–ನ್ಯೂ ಇಯರ್ ಬಂಪರ್ ಲಾಟರಿಯ ಮೊದಲ ಬಹುಮಾನದ ಮೊತ್ತವನ್ನು 25 ಕೋಟಿ ರೂಪಾಯಿಗೆ ಹೆಚ್ಚಿಸಲಾಗಿದೆ. ಕಳೆದ ವರ್ಷ 20 ಕೋಟಿ ರೂಪಾಯಿ ಇದ್ದ ಮೊದಲ ಬಹುಮಾನದ ಮೊತ್ತವನ್ನು ಈ ಬಾರಿ ಐದು ಕೋಟಿ ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ.
ನವೆಂಬರ್ 28ರಿಂದ ಲಾಟರಿ ಟಿಕೆಟ್ಗಳು ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ. ಒಂದು ಟಿಕೆಟ್ನ ಬೆಲೆ 450 ರೂಪಾಯಿ ನಿಗದಿಪಡಿಸಲಾಗಿದೆ.
ಮೊದಲ ಬಹುಮಾನದ ಜೊತೆಗೆ ಎರಡನೇ ಬಹುಮಾನವಾಗಿ ತಲಾ ಒಂದು ಕೋಟಿ ರೂಪಾಯಿಯಂತೆ 24 ಮಂದಿಗೆ ನೀಡಲಾಗುತ್ತದೆ.
ಲಾಟರಿಯ ಡ್ರಾ 2027ರ ಫೆಬ್ರವರಿ 1ರಂದು ನಡೆಯಲಿದೆ.
ಹೆಚ್ಚಿನ ಬಹುಮಾನದ ಮೊತ್ತ ಘೋಷಿಸಿರುವ ಹಿನ್ನೆಲೆಯಲ್ಲಿ ಈ ಬಾರಿ ಲಾಟರಿ ಟಿಕೆಟ್ಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ನಿರೀಕ್ಷೆಯನ್ನು ಲಾಟರಿ ಇಲಾಖೆ ಹೊಂದಿದೆ.
ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ಗಳನ್ನು ಮಾರಾಟ ಮಾಡುವ ನಿರೀಕ್ಷೆಯಲ್ಲಿ ಇಲಾಖೆ ಇದೆ. ಟಿಕೆಟ್ ವಿತರಣೆಗಾಗಿ ಏಜೆನ್ಸಿಗಳ ಮೂಲಕ ಪ್ರಾಥಮಿಕ ಸಿದ್ಧತೆಗಳನ್ನೂ ಆರಂಭಿಸಲಾಗಿದೆ.



