HEALTH TIPS

ಕಾರ್ಯತಂತ್ರ, ರಕ್ಷಣಾ ಸಹಕಾರಕ್ಕೆ ಒತ್ತು

ಟೋಕಿಯೊ (PTI): ಕಾರ್ಯತಂತ್ರ, ರಕ್ಷಣಾ ಸಹಕಾರ ಹೆಚ್ಚಳ, ಕಡಲ ಭದ್ರತೆ ಹಾಗೂ ತಂತ್ರಜ್ಞಾನ ಸಹಕಾರ ವೃದ್ಧಿಪಡಿಸಲು ಭಾರತ ಹಾಗೂ ಜಪಾನ್‌ ಒಪ್ಪಿಗೆ ಸೂಚಿಸಿವೆ.


‘ಭಾರತ–ಜಪಾನ್‌ ವಿದೇಶಾಂಗ, ರಕ್ಷಣಾ ಸಚಿವರ ನಡುವಿನ ನಾಲ್ಕನೇ ಮಾತುಕತೆಯ ಅಂಗವಾಗಿ ಟೋಕಿಯೊದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 

ಸಭೆಯ ಬಳಿಕ ಟೋಕಿಯೊದಲ್ಲಿ ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಜಪಾನ್‌ನ ವಿದೇಶಾಂಗ ಸಚಿವ ತೋಷಿಮಿಟ್ಸು ಮೊಟೆಗಿ, ರಕ್ಷಣಾ ಸಚಿವ ಶಿಂಜಿರೊ ಕೊಯಿಜುಮಿ ಅವರು ಗುರುವಾರ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಜಾಗತಿಕ ಅಸ್ಥಿರತೆಯ ಸಂದರ್ಭದಲ್ಲಿ ಸಂಪನ್ಮೂಲ, ಸಂಪರ್ಕ ಹಾಗೂ ಪೂರೈಕೆ ಜಾಲವನ್ನು ‘ಆಯುಧ’ವಾಗಿ ಬಳಸಿಕೊಳ್ಳುತ್ತಿರುವ ಕೆಲವು ರಾಷ್ಟ್ರಗಳ ನಡೆಯ ಕುರಿತು ಎಸ್‌.ಜೈಶಂಕರ್‌ ಈ ವೇಳೆ ಕಳವಳ ವ್ಯಕ್ತಪಡಿಸಿದರು. ಇದೇ ವೇಳೆ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಸಾಗರ ಹಾಗೂ ಕ್ಷಿಪಣಿ ತಂತ್ರಜ್ಞಾನದ ಸಹಕಾರಕ್ಕೆ ಉಭಯ ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆ ಎಂದು ಪ್ರಕಟಿಸಿದರು.

ಜಾಗತಿಕ ವ್ಯವಸ್ಥೆಯಲ್ಲಿ ನ್ಯಾಯಯುತ ಸ್ಪರ್ಧಾತ್ಮಕ ಪರಿಸರವನ್ನು ಕಾಪಾಡಿಕೊಳ್ಳುವ ಕುರಿತು ಉಭಯ ರಾಷ್ಟ್ರಗಳು ಸಭೆಯಲ್ಲಿ ಒಪ್ಪಿಗೆ ಸೂಚಿಸಿವೆ. ಸಮಾನಮನಸ್ಕ ಪಾಲುದಾರರಲ್ಲಿ ವಿಶ್ವಾಸಾರ್ಹವಾಗಿ ಪೂರೈಕೆ ಸರಪಳಿಯನ್ನು ಬಲಪಡಿಸಲು ನಿರ್ಧರಿಸಿವೆ.

ಇದಕ್ಕೂ ಮುನ್ನ ಭಾರತದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಜಪಾನ್‌ನ ರಕ್ಷಣಾ ಸಚಿವ ಶಿಂಜಿರೊ ಕೊಯಿಜುಮಿ ಜೊತೆಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು.

ಸಭೆಯ ಬಳಿಕ ‘ಎಕ್ಸ್‌’ ಮಾಡಿರುವ ಸಿಂಗ್‌, ‘ಇಂಡೋ–ಪೆಸಿಫಿಕ್‌ ಪ್ರದೇಶವನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಮುನ್ನಡೆಸುವ ನಿಟ್ಟಿನಲ್ಲಿ ಉಭಯ ಸಚಿವರು ಅಭಿಪ್ರಾಯ ಹಂಚಿಕೊಂಡಿದ್ದೇವೆ’ ಎಂದು ತಿಳಿಸಿದ್ದಾರೆ.

ರಕ್ಷಣಾ ಕ್ಷೇತ್ರದಲ್ಲಿ ಸಹಕಾರವನ್ನು ಬಲಪಡಿಸುವ ಜೊತೆಗೆ ಕಡಲ ಕ್ಷೇತ್ರದಲ್ಲಿ ಸಹಕಾರ ಹೆಚ್ಚಳ, ರಕ್ಷಣಾ ತಂತ್ರಜ್ಞಾನಗಳು ಹಾಗೂ ಕೈಗಾರಿಕೆ ಸಹಯೋಗದ ಕುರಿತು ಉಭಯ ರಾಷ್ಟ್ರಗಳು ಮುಖ್ಯವಾಗಿ ಮಾತುಕತೆ ನಡೆಸಿವೆ.

ಕ್ಷಿಪಣಿ ತಂತ್ರಜ್ಞಾನಗಳ ಸಹಕಾರವನ್ನು ಚುರುಕುಗೊಳಿಸಿ, ಕಡಲ ಭದ್ರತಾ ಸಹಕಾರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸಹಿ ಹಾಕಲಾದ ಒಪ್ಪಂದದ ಜ್ಞಾಪನಾಪತ್ರವನ್ನು ಆದಷ್ಟು ಬೇಗ ಜಾರಿಗೊಳಿಸಲು ಹೆಚ್ಚಿನ ಒತ್ತು ನೀಡಲಾಗಿದೆ.

ಜಂಟಿ ಹೇಳಿಕೆಯ ಪ್ರಮುಖಾಂಶಗಳು

ನಾವೀನ್ಯ ಹಾಗೂ ನವೋದ್ಯಮ ಉದ್ಯಮಗಳಲ್ಲಿ ಜಂಟಿಯಾಗಿ ಹೆಚ್ಚು ತೊಡಗಿಸಿಕೊಳ್ಳುವಿಕೆ

ಭಾರತೀಯ ನೌಕಾಪಡೆ ಹಾಗೂ ಜಪಾನ್‌ನ ಕಡಲಪಡೆಯಲ್ಲಿ ಪರಸ್ಪರ ಸಹಕಾರ

ನೌಕಾ ಹಡಗು ಜಂಟಿ ನಿರ್ಮಾಣ ಹಾಗೂ ವಿನ್ಯಾಸಕ್ಕೆ ಆದ್ಯತೆ

ರಕ್ಷಣಾ ಕೈಗಾರಿಕೆಯಲ್ಲಿ ಸಹಕಾರ; ಜಪಾನ್‌ ಜೊತೆ ವಿನ್ಯಾಸ, ಮೇಕ್‌ ಇನ್‌ ಇಂಡಿಯಾಕ್ಕೆ ಒತ್ತು

ಭಾರತೀಯ ನೌಕಾಪಡೆಯ ಹಡಗುಗಳ ಸಂಯೋಜಿತ ಅಂಟೆನಾಗಳ ಪರಸ್ಪರ ಜಂಟಿ ಅಭಿವೃದ್ಧಿ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸುಧಾರಣೆಗೆ ಆಗ್ರಹ

ವಿಶ್ವಸಂಸ್ಥೆ ಪಟ್ಟಿಯಲ್ಲಿರುವ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries